ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಸ್ತೆ ಅಭಿವೃದ್ಧಿಗೆ 30 ಕೋಟಿ: ಕಿಮ್ಮನೆ

Lingaraj Badiger
Updated On : 25 May 2013, 11:10 am

ಹೊಸನಗರ: ನಗರ ಹೋಬಳಿಯ ವಿವಿಧ ರಸ್ತೆ ಅಭಿವೃದ್ಧಿಗೆ 30 ಕೋಟಿ ಮಂಜೂರು ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ನಗರ ಹೋಬಳಿಯ ನಿಯೋಗದೊಂದಿಗೆ ಮಾತನಾಡಿದ ಅವರು, ಹುಲಿಕಲ್ ಘಾಟ್, ಮಾಸ್ತಿಕಟ್ಟೆ-ಕಾನಗೋಡಿನಿಂದ ಕವಲೇ ದುರ್ಗಾ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿಗೆ 17.25 ಕೋಟಿ ಮತ್ತು ಜಯನಗರದಿಂದ ನಗರ ಮಾರ್ಗವಾಗಿ ಸಂಪೇಕಟ್ಟೆ ರಸ್ತೆ ಅಭಿವೃದ್ಧಿಗೆ 13 ಕೋಟಿ ಮಂಜೂರಾಗಿದೆ ಎಂದರು.
ಕಾಲೇಜಿಗೆ ಮನವಿ: ನಗರ ಹೋಬಳಿ ಕೇಂದ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವಶ್ಯಕತೆ ಇದೆ ಮತ್ತು ಹಿನ್ನೀರಿನಿಂದ ತುಂಬಿರುವ ಪ್ರದೇಶಗಳ ವಿದ್ಯಾರ್ಥಿಗಳ ಸುಲಲಿತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ನಿಲಯಯ ಅಗತ್ಯವಿದ್ದು ಮಂಜೂರು ಮಾಡಿಸುವ ನಿಯೋಗ ಮನವಿ ಮಾಡಿದ್ದು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪ್ರಮುಖರಾದ ಸಿ. ರಾಮಚಂದ್ರರಾವ್, ದೇವಗಂಗೆ ಚಂದ್ರಶೇಖರಶೆಟ್ಟಿ, ನೂಲಿಗ್ಗೇರಿ ಅಬ್ಬಾಸ್, ತೋಟಪ್ಪಗೌಡ, ಗೋಪಾಲಶೆಟ್ಟಿ, ಅಂತೋನಿ ಸಿಕ್ವೇರಾ, ವಿನಾಯಕ ಉಡುಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement