ವಾಹನ ಚಾಲಕರ ಸಂಘದ ಮಹಾಸಭೆ
ಶಿವಮೊಗ್ಗ: ಮೇ 26ರಂದು ಬೆಳಗ್ಗೆ 10ಗಂಟೆಗೆ ಸಂಘದ ಕಚೇರಿಯಲ್ಲಿ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಮಹಾಸಭೆಯನ್ನು ಏರ್ಪಪಡಿಸಲಾಗಿದೆ. ಅಂದು ಮಧ್ಯಾಹ್ನ 2ಗಂಟೆಗೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಸರ್ಕಾಕಾರಿ ವಾಹನಗಳ ಚಾಲಕರು ಸಕಾಲಕ್ಕೆ ಆಗಮಿಸುವಂತೆ ಕಾರ್ಯದರ್ಶಿ ಜಿ. ಹಾಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೃಶ್ಯಕಲಾ ಕಾಲೇಜು ಪ್ರವೇಶಕ್ಕೆ ಅರ್ಜಿ
ಶಿವಮೊಗ್ಗ: ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರಥಮ ಮೂಲ ತರಗತಿ, ಪ್ರಥಮ ಬಿಎಫ್‌ಎ ತರಗತಿಗಳ ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ(ಗ್ರಾಫಿಕ್), ಅನ್ವಯಕಲೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ ಹಾಗೂ ಕಲಾ ಇತಿಹಾಸ ವಿಷಯಗಳ ಪದವಿಗಳ ಪ್ರವೇಶಕ್ಕೆ ಅರ್ಹಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ಮೂಲ ತರಗತಿಗೆ ಅರ್ಜಿ ಸಲ್ಲಿಸಲು ಜೂನ್ 4 ಕೊನೆಯದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ 11ರಂದು ಬೆಳಿಗ್ಗೆ 11ಗಂಟೆಯಿಂದ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಿಟಿಐ ಕಟ್ಟಡದಲ್ಲಿ ಅರ್ಹತಾ ಪರೀಕ್ಷೆ, ಮಧ್ಯಾಹ್ನ 2ಗಂಟೆಗೆ ವೈಯಕ್ತಿಕ ಸಂದರ್ಶನ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಮೂಲ ದಾಖಲಾತಿಗಳನ್ನು ಪರೀಶಿಲನೆಗೆ ಹಾಜರು ಪಡಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಜೂನ್ 15ರೊಳಗಾಗಿ ಶುಲ್ಕ ಪಾವತಿಸಬೇಕು. ಜೂನ್ 17ರಿಂದ ತರಗತಿಗಳು ಆರಂಭವಾಗಲಿವೆ. ವಿವರಗಳಿಗಾಗಿ ದೂರವಾಣಿ ಸಂಖ್ಯೆ 0821-2438931ನ್ನು ಸಂಪರ್ಕಿಸಬಹುದು.
ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಭೆ
ಹೊಸನಗರ: ತಾಲೂಕಿನ ನಗರ ಸಿಂಡಿಕೇಟ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಗ್ರಾಹಕರಿಂದ ಅಹವಾಲು ಸ್ವೀಕರಿಸಲಾಯಿತು.ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ತ್ವರಿತ ವ್ಯವಹಾರ ಅಸಾಧ್ಯವಾಗಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿದರು.ಶಾಖಾ ಪ್ರಬಂಧಕ ಕುಮಾರನಾಯ್ಕ್, ಗ್ರಾಹಕರ ಸಮಸ್ಯೆಗಳ ಬಗ್ಗೆ ಪ್ರಧಾನಕಚೇರಿಗೆ ವರದಿ ಸಲ್ಲಿಸಲಾಗುವುದು ಅಲ್ಲಿಯವರೆಗೆ ಸಹಕರಿಸುವಂತೆ ಮನವಿ ಮಾಡಿದರು.
ಎಟಿಎಂ ಸೌಲಭ್ಯ: ಗ್ರಾಹಕರ ಹಿತದೃಷ್ಟಿಯಿಂದ ಎಟಿಎಂ ಸೌಲಭ್ಯ ಮಂಜೂರಾಗಿದ್ದು ಶೀಘ್ರವೇ ಕೌಂಟರ್ ತೆರೆಯಲಾಗುವುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಎಟಿಎಂ ಕಾರ್ಡ್ ನೋಂದಣಿ ಮಾಡಬೇಕು.
--