ವೈದ್ಯರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ
ಸೊರಬ: ತಾಲೂಕಿನ ಹೋಬಳಿ ಪ್ರದೇಶ ಜಡೆ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಜನಸಾಮಾನ್ಯರ ಸ್ಥಿತಿ ಅತಂತ್ರವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಗುರುರಾಜ್ ಆಕ್ಷೇಪಿಸಿ, ಶುಕ್ರವಾರ ಜಡೆ ಆಸ್ಪತ್ರೆ ಎದುರು ತಾದಸಂಸ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಸ್ಪಂಧಿಸಿರುವ ಆರೋಗ್ಯ ಇಲಾಖೆ ಕೂಡಲೇ ಕೊರತೆಯನ್ನು ನೀಗಿಸುವಲ್ಲಿ ಮುಂದಾಗಿದ್ದು, ಒಬ್ಬ ವೈದ್ಯರನ್ನು ನೇಮಿಸಿದ್ದರಿಂದ ದಸಂಸದವರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.