ಸಾಮೂಹಿಕ ಉಪನಯನ
ಶಿವಮೊಗ್ಗ: ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘ ಜೂನ್ 2ರಂದು ಕೃಷಿ ನಗರದಲ್ಲಿರುವ ಶ್ರೀ ಗಾಯಿತ್ರಿ ದೇವಸ್ಥಾನದಲ್ಲಿ ಸಾಮೂಹಿಕ ಉಪನಯನ ಏರ್ಪಡಿಸಿದೆ. ಶ್ರೀ ವಿಶ್ವಕರ್ಮ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರು ಮೇ 31ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ-
7760068302.
ಗಮಕ ವಾಚನ
ಶಿವಮೊಗ್ಗ: ಲಲಿತ ಕಲಾ ಕೇಂದ್ರ ಮತ್ತು ಶ್ರೀ ಗೀತಾ ಸತ್ಸಂಗ ಆಶ್ರಯದಲ್ಲಿ ಮೇ 25ರಂದು ಸಂಜೆ 5ಕ್ಕೆ ಮತ್ತೂರಿನ ಶ್ರೀರಾಮ ಮಂದಿರದಲ್ಲಿ ಶಂಕರ ಅವತಾರ (ಶಂಕರ ವಿಜಯ) ಗಮಕ ವಾಚನ ಮತ್ತು ವ್ಯಾಖ್ಯಾನ ಆಯೋಜಿಸಲಾಗಿದೆ.
ಮುಖ್ಯ ಅತಿಥಿಯಾಗಿ ಸಹ್ಯಾದ್ರಿ ಮಹಾವಿದ್ಯಾಲಯದ ಉಪ ಪ್ರಾಧ್ಯಾಪಕ ಎಚ್.ಎಂ. ನಾಗಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಪಾಲ್ಗೊಳ್ಳುವರು.
ಸೀತಾಗೋಪಾಲ ಅವಧಾನಿ (ವಾಚನ), ತಾರಾಪ್ರಸಾದ್ (ವ್ಯಾಖ್ಯಾನ) ಮಾಡುವರು ಎಂದು ಸಂಸ್ಥೆಯ ಅಧ್ಯಕ್ಷ ಮಾರ್ಕಾಂಡೇಯ ಅವಧಾನಿ ತಿಳಿಸಿದ್ದಾರೆ.
ನಾಟಕ ಪ್ರದರ್ಶನ
ಶಿವಮೊಗ್ಗ: ಶ್ರೀ ಕನ್ನಿಕಾ ಮಹಿಳಾ ಸಂಘ ಮೇ 26ರಂದು ಸಂಜೆ4ಕ್ಕೆ ಕುವೆಂಪು ರಂಗಮಂದಿರದಲ್ಲಿ ಶ್ರೀ ವಾಸವಿ ವಿಜಯ ನಾಟಕ ಪ್ರದರ್ಶನ ಏರ್ಪಡಿಸಿದೆ. 3.30ಕ್ಕೆ ಪ್ರಸಿದ್ದ ಲೇಖಕ ಮತ್ತು ಸಮಾಜ ಸೇವಕ ಸತ್ಯನಾರಾಯಣ ಶ್ರೇಷ್ಠಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಆರ್ಯವೈಶ್ಯ ವಾಸವಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಎಚ್.ಆರ್.ಕೆ. ಮೂರ್ತಿ ಅಧ್ಯಕ್ಷತೆ ವಹಿಸುವರು. ಸಂಜೆ 4 ರಿಂದ 6ಗಂಟೆವರೆಗೆ ಮೊದಲ ಪ್ರದರ್ಶನ ಮತ್ತು ರಾತ್ರಿ 7 ರಿಂದ 9 ಗಂಟೆವರೆಗೆ ಎರಡನೇ ಪ್ರದರ್ಶನ ಇರುತ್ತದೆ ಎಂದು ಸಂಘ ತಿಳಿಸಿದೆ. ವಿವರಗಳಿಗಾಗಿ- 08182-276572.
ವಿಶೇಷ ಉಪನ್ಯಾಸ
ಶಿವಮೊಗ್ಗ: ಭಾರತೀಯ ಸಾಂಸ್ಕೃತಿಕ ವೇದಿಕೆ ಮೇ 26ರಂದು ಸಂಜೆ 4.30ಕ್ಕೆ ತಿಲಕ ನಗರದ ಭರತ್ನ್ಯೂರೋ ಕ್ಲಿನಿಕ್ನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಡಾ. ಸಂಧ್ಯಾ ಪಂಜಿ ಅವರು ಹೃದಯ ಸ್ತಂಭನ ಮತ್ತು ಪ್ರಥಮ ಚಿಕಿತ್ಸೆ ಎಂಬ ವಿಷಯ ಕುರಿತು ಉಪನ್ಯಾಸ ಮಾಡಲಿದ್ದಾರೆ. ಶಾಸಕ ಪ್ರಸನ್ನ ಕುಮಾರ್ ಅವರನ್ನು ಅಭಿನಂದಿಸಲಾಗುವುದು ಎಂದು ಡಾ. ಶಿವರಾಮಕೃಷ್ಣ ತಿಳಿಸಿದ್ದಾರೆ.