ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅತಿಥಿ ಶಿಕ್ಷಕರ ಸೇವೆ ಮುಂದುವರಿಕೆ: ಕಿಮ್ಮನೆ

Vishwanath S
Updated On : 26 May 2013, 2:42 am

ಕ.ಪ್ರ.ವಾರ್ತ್ಣೆ ಹೊಸನಗರ ಮೇ 25
 ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳಿಗೆ ನಕ್ಸಲ್ ಪ್ಯಾಕೇಜ್ ಅನ್ವಯ ಅತಿಥಿ ಶಿಕ್ಷಕರ ಸೇವೆಯನ್ನು ಮುಂದುವರಿಸಲು ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
 ತಾಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದ್ದು ಶೀಘ್ರದಲ್ಲಿ 2300 ಶಿಕ್ಷಕರ ನೇಮಕಾತಿ ಮಾಡಲಾಗುವುದು. ಎರಡು ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪರಿಹಾರಕ್ಕೆ ಕ್ರಮ: ಕಳೆದಬಾರಿ ತಾಲೂಕಿನ ನಗರ ಹೋಬಳಿ ಮತ್ತು ಇತರ ಭಾಗದಲ್ಲಿ ನೆರೆಹಾವಳಿ ಕಂಡುಬಂದು ಭಾರೀ ಹಾನಿ ಸಂಭವಿಸಿತ್ತು. ಆದರೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ ಹೀಗಾಗಿ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಕೂಡಲೆ ಸಭೆ ಕರೆದು ಸೂಕ್ತ ಪರಿಹಾರ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.
ಕಾಗೋಡು ಅಸಮಾಧಾನ: ಎಸಿ, ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳ ವ್ಯವಸ್ಥೆ ಹೊಲಸಾಗಿದೆ.
 ದಿಸ್ ಈಸ್ ನಾಟ್ ಗುಡ್, ಐಯಾಮ್ ನೋ  ಹ್ಯಾಪಿ ಎಂದು ಹೇಳುವ ಬಗ್ಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಾಜಿ ಸಚಿವ, ಶಾಸಕ ಕಾಗೋಡು ತಿಮ್ಮಪ್ಪ ಅಸಮಧಾನ ವ್ಯಕ್ತಪಡಿಸಿದರು.
 ಜನರಿಗೆ ಪೂರಕವಾಗಿ ಸರ್ಕಾರಿ ಕಚೇರಿಗಳಲ್ಲಿ ಉತ್ತಮ ವಾತಾವರಣ ಕೂಡಲೆ ನಿರ್ಮಾಣ ಮಾಡುವಂತೆ  ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
 ಜಿಪಂ ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಕಲಗೋಡು ರತ್ನಾಕರ್, ತಾಪಂ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಗೀತಾ ನಿಂಗಪ್ಪ, ತಹಶೀಲ್ದಾರ್ ಅರ್ಚನಾ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement