ಜೂನ್1ರಿಂದ ಉಚಿತ ತರಬೇತಿ
ಶಿವಮೊಗ್ಗ: ಸಮನ್ವಯ ಸಂಸ್ಥೆ ಜೂನ್ 1ರಿಂದ 5ರವರೆಗೆ ಎಂಪ್ಲಾಯಬಿಲಿಟಿ ಅಂಡ್ ಸ್ಕಿಲ್ಸ್ ಎಂಬ ವಿಚಾರದ ಬಗ್ಗೆ 5 ದಿನಗಳ ತರಬೇತಿಯನ್ನು ಉಚಿತವಾಗಿ ಆಯೋಜಿಸಿದೆ. ಯಾವುದೇ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಪದವಿಯನ್ನು ಪಡೆದ ವಿದ್ಯಾರ್ಥಿಗಳು ಅರ್ಹರಿದ್ದು, 30 ವರ್ಷದ ವಯೋವುತಿಯೊಳಗಿರುವ 35 ಜನರಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತರು ಮೇ 29 ರೊಳಗೆ ತಮ್ಮ ಹೆಸರನ್ನು ನೋಂದಾಯಿಸುವಂತೆ ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 9945387650.