ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಾರೋಹಿತ್ಲು ಸುಬ್ಬರಾವ್‌ಗೆ ಕೃಷಿ ಪ್ರಶಸ್ತಿ

Lingaraj Badiger
Updated On : 27 May 2013, 10:57 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 26
ಕೃಷಿ ಇಲಾಖೆಯು 2012-13ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ವಿಜೇತರಾದ ಕೃಷಿಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹಮಾನ 10 ಸಾವಿರ, ತೃತೀಯ ಬಹುಮಾನ 5 ಸಾವಿರ ಹಾಗೂ ತಾಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರತಿ ತಾಲೂಕಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 5 ಸಾವಿರ ಹಾಗೂ ತೃತೀಯ ಬಹುಮಾನ 3ಗಳನ್ನು ನೀಡಿ ಗೌರವಿಸಲಿದೆ. ಜಿಲ್ಲಾ ಮಟ್ಟದಲ್ಲಿ ಹೊಸನಗರ ತಾಲೂಕು ಹಾರೋಹಿತ್ಲು ಗ್ರಾಮದ ಸುಬ್ಬರಾವ್ (ಪ್ರಥಮ), ಶಿವಮೊಗ್ಗ ತಾಲೂಕು ಗಾಜನೂರಿನ ರಾಜಪ್ಪ (ದ್ವಿತೀಯ) ಭದ್ರಾವತಿ ತಾಲೂಕು ದೊಣಬಘಟ್ಟದ ರಹೀಂಬೇಗ್(ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ತಾಲೂಕು ಮಟ್ಟದಲ್ಲಿ ವಿಜೇತರು-ಶಿವಮೊಗ್ಗ ತಾಲೂಕು, ಆಯನೂರಿನ ಎನ್. ಬಸವರಾಜ್ (ಪ್ರಥಮ) ತಿಮಕಾಪುರದ
ವಿಜಯಲಕ್ಷ್ಮಿ(ದ್ವಿತೀಯ) ಕೆ.ಪಿ. ಕೃಷ್ಣಮೂರ್ತಿ (ತೃತೀಯ), ಭದ್ರಾವತಿ, ದೊಣಬಘಟ್ಟದ ಫಜಲ್‌ಬೇಗ್ (ಪ್ರಥಮ), ತಟ್ಟೆಹಳ್ಳಿಯ ಮಂಜೋಜಿರಾವ್ ಮತ್ತು ಆನವೇರಿಯ ಮೌನೇಶಾಚಾರ್ (ತೃತೀಯ) ತೀರ್ಥಹಳ್ಳಿ, ಕೀಗಡಿಯ ಕೆ.ಎಂ. ಯೋಗೇಂದ್ರ(ಪ್ರಥಮ) ಸಣ್ಣಿಕೊಪ್ಪದ ಪುರುಷೋತ್ತಮ (ದ್ವಿತೀಯ) ಮತ್ತು ಹಣಗೆರೆಯ ಬಂಗಾರಪ್ಪ (ತೃತೀಯ) ಸಾಗರ, ಹಿರೇಹಾರಕ ಸಂಗಣ್ಣಕೆರೆಯ ಶೇಖರಪ್ಪ (ಪ್ರಥಮ) ಪರಮೇಶ್ವರ (ದ್ವಿತೀಯ) ಹಾಗೂ ಲಿಂಗರಾಜು (ತೃತೀಯ), ಹೊಸನಗರ, ಎಚ್.ಎಸ್. ಸಿದ್ದಪ್ಪ, ತೇಜಸ್ವಿ ಎಸ್.ವೈ (ದ್ವಿತೀಯ) ಹಾಗೂ ಯೋಗೇಂದ್ರ (ತೃತೀಯ), ಶಿಕಾರಿಪುರ, ಪ್ರಭುದೇವ (ಪ್ರಥಮ) ಬಸವರಾಜಪ್ಪ ಮತ್ತು ಬಿ. ನಾಗರತ್ನ (ತೃತೀಯ) ಸೊರಬ, ಅಂಡಿಗೆ ಗ್ರಾಮದ ಕೆ.ಪಿ. ಷಣ್ಮುಖಪ್ಪ, ಮಳಲಿಕೊಪ್ಪದ ಗಣೇಶಪ್ಪ ಮತ್ತು ಬಂಕವಳ್ಳಿಯ ಲಿಂಗರಾಜ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶಿವಮೂರ್ತಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement