ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರ್ಜಿ ಆಹ್ವಾನ

Lingaraj Badiger
Updated On : 28 May 2013, 10:33 am

ಶಿವಮೊಗ್ಗ: ತಾಂತ್ರಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಐಟಿಐ ವಿದ್ಯಾರ್ಥಿಗಳಿಗೆ 2ನೇ ವರ್ಷ, 3ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶಕ್ಕೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 ಪ್ರವೇಶ ಪಡೆಯಲಿಚ್ಚಿಸುವ ಅಭ್ಯರ್ಥಿ ಅರ್ಜಿಯನ್ನು ಅಂತರ್ಜಾಲ ತಾಣ ಢಿಢಿಢಿ.ಜಜಡಿ.್ಞಛ್ಠ.ಟ್ಝ್ಛಿ.್ಝಟಿ, ಅಥವಾ ಢಿಢಿಢಿ.ಜ್ಝಠಟ್ಟಟಛಛಜಟ್ಝಡಡ್ಝ್ಟಟಿ.್ಝಟಿ ನಿಂದ ಪಡೆದು, ಪರಿಶಿಷ್ಟ ಜಾತಿ, ಪಂಗಡ ಪ್ರವರ್ಗ-1ರ ಅಭ್ಯರ್ಥಿಗಳು 50 ರುಪಾಯಿ ಹಾಗೂ ಇತರೆ ಗುಂಪಿನ ಅಭ್ಯರ್ಥಿಗಳು 100 ರುಪಾಯಿ ಶುಲ್ಕವನ್ನು ಹಾಗೂ ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಜೂನ್ 24ರೊಳಗಾಗಿ ನೋಡಲ್ ಸೆಂಟರ್‌ನಲ್ಲಿ ಸಲ್ಲಿಸಬೇಕು.
 ಜೂನ್ 28ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ, ಜೂನ್ 29ರಂದು ಜೇಷ್ಠತಾ ಪಟ್ಟಿ ಪರಿಷ್ಕರಣೆ ಮತ್ತು ತಿದ್ದುಪಡಿಗೆ ಅವಕಾಶ, ಜುಲೈ 1ರಂದು ಅಂತಿಮ ಹಂತದ ಜೇಷ್ಠತಾ ಪಟ್ಟಿ ಪ್ರಕಟ, ಜುಲೈ 3ರಿಂದ 6ರವರೆಗೆ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ವಿವರಗಳಿಗಾಗಿ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement