ಎಂಪಿಎಂನಿಂದ ನೂತನ ಸಚಿವರಿಗೆ ಸನ್ಮಾನ
ಭದ್ರಾವತಿ: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ಉದ್ಯೋಗಿಗಳ ಸಂಘದ ಪದಾಧಿಕಾರಿಗಳು ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಭಾನುವಾರ ತೀರ್ಥಹಳ್ಳಿಯಲ್ಲಿ ಭೇಟಿಮಾಡಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಂ.ಪಿ.ಎಂ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಪರಮಶಿವ, ಖಜಾಂಚಿ ಮಂಜುನಾಥ್ ಹಾಗೂ ಎಂ.ಪಿ.ಎಂ. ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಕಾಶ್ರಾವ್ ಮೊದಲಾದವರು ಹಾಜರಿದ್ದರು.