ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕ್ರಿಯಾಶೀಲತೆ ವೃದ್ಧಿಗೆ ರಕ್ತದಾನ ಮಾಡಿ: ಸಂಸದ

Lingaraj Badiger
Updated On : 28 May 2013, 10:33 am

ಕ.ಪ್ರ.ವಾರ್ತೆ, ಶಿಕಾರಿಪುರ, ಮೇ 27 ನಿಯಮಿತ ರಕ್ತದಾನದ ಮೂಲಕ ಹೊಸ ರಕ್ತ ಉತ್ಪತ್ತಿಯಾಗಿ ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿರಲು ಯುವ ಪೀಳಿಗೆ ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘ ರಾಜೇಂದ್ರ ವಿರಕ್ತಮಠ, ಯೋಗಯಜ್ಞ ಕೇಂದ್ರ, ಅರುಣೋದಯ ತರುಣ ಸಂಘ, ಜ. ರೇಣುಕಾಚಾರ್ಯ ಯುವ ಬಳಗ, ರೆಡ್ ಕ್ರಾಸ್, ಜೇಸಿಸ್ ಮೊದಲಾದ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೇಷ್ಠ ದಾನ: ರಕ್ತದಾನ ಇಂದು ಅತ್ಯಂತ ಶ್ರೇಷ್ಠವಾಗಿದ್ದು, ಯುವ ಪೀಳಿಗೆ ನಿಯಮಿತ ರಕ್ತದಾನದ ಮೂಲಕ ಶರೀರದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಸದಾ ಕಾಲ ಕ್ರಿಯಾಶೀಲವಾಗಿರಲು ಸಾಧ್ಯ ಎಂದ ಅವರು ಈ ದಿಸೆಯಲ್ಲಿ ಯುವಪೀಳಿಗೆ ರಕ್ತದಾನಕ್ಕೆ ಸ್ವಯಂಪ್ರೇರಿತರಾಗಿ ಮುಂದಾಗುವಂತೆ ತಿಳಿಸಿದರು.
ಬಸವೇಶ್ವರರ ಜಯಂತಿ ಅಂಗವಾಗಿ ಸತತ 3ನೇ ವರ್ಷದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದ ಅವರು ಜಾತಿಯ ವಿಷಬೀಜ ಸಮಾಜದಲ್ಲಿ ಹೆಮ್ಮರವಾಗಿದ್ದ ಸಂದರ್ಭದಲ್ಲಿ ಕೇವಲ ಮಾನವ ಜಾತಿಯನ್ನು ರೂಪಿಸಿದ ಬಸವೇಶ್ವರರನ್ನು ರಕ್ತದಾನದ ಮೂಲಕ ಯುವಕರು ಇಂದಿನ ಪೀಳಿಗೆಗೆ ಪುನಃ ನೆನಪಿಸುವ ಕಾರ್ಯ ಎಲ್ಲಾ ವರ್ಗಕ್ಕೆ ಮಾದರಿಯಾಗಿದೆ ಎಂದರು.
ಪರ್ಯಾಯವಿಲ್ಲ: ಜಗಜ್ಯೋತಿ ಬಸವೇಶ್ವರ ಯುವ ಬಳಗದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಉತ್ಪಾದಿಸುವುದು ಅಸಾಧ್ಯವಾದ ರಕ್ತದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ರಕ್ತದಾನ ಅನಿವಾರ್ಯವಾಗಿದೆ ಎಂದರು.
ರಕ್ತದಾನದ ಬಗೆಗಿನ ಮೂಢನಂಬಿಕೆಯನ್ನು ಹೋಗಲಾಡಿಸಿ ಮನುಷ್ಯ ಮನುಷ್ಯತ್ವದಿಂದ ಮನುಷ್ಯರಿಗೆ ರಕ್ತದಾನ ಮಾಡಿದಲ್ಲಿ ಮಾತ್ರ ರಕ್ತದ ಲಭ್ಯತೆ ಸಾಧ್ಯ ಎಂದರು.
ಸ್ಥಳೀಯ ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ಅಲ್ಲಮ ಪ್ರಭು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಘು ಎಂ.ಆರ್, ಪುರಸಭಾ ಸದಸ್ಯ ಅಂಗಡಿ ಜಗದೀಶ್, ಯೋಗ ಯಜ್ಞ ಕೇಂದ್ರದ ರವೀಂದ್ರಸಿಂಗ್, ಅಕ್ಕಮಹಾದೇವಿ ಸಹಕಾರ ಸಂಘದ ಅಧ್ಯಕ್ಷೆ ರತ್ನಾ ಜಯಣ್ಣ, ನಿರ್ದೇಶಕಿ ನಿರ್ಮಲಾ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಶ್ಚಂದ್ರ ಸ್ಥಾನಿಕ್, ರಮಣಿ ಕೋಟ್ರೇಶಪ್ಪ, ರುದ್ರಮುನಿ, ಜಯಲಿಂಗಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement