ನಾಳೆ ಅಂತರಘಟ್ಟಮ್ಮ ಜಾತ್ರೆ
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಅಂತರಘಟ್ಟಮ್ಮ ದೇವಾಲಯ ಸೇವಾ ಸಮಿತಿಯಿಂದ ಮೇ 29ರಂದು ಬೆಳಗ್ಗೆ 11.35ಕ್ಕೆ ಅಂತರಘಟ್ಟಮ್ಮ ದೇವಿಯ ಜಾತ್ರೆ ಹಾಗೂ ಕೆಂಡದಾರ್ಚನೆ ನಡೆಯಲಿದೆ. ಮೇ 27ರ ಸಂಜೆ 6 ಗಂಟೆಗೆ ಗಂಗೆಪೂಜೆ, ಕಂಕಣ ಬಂಧನ ಮತ್ತು ಸುಮಂಗಲಿಯರಿಗೆ ದ್ರವ್ಯ ವಿತರಣೆ ನಡೆಯಲಿದೆ. ಮೇ 28ರಂದು ಬೆಳಿಗ್ಗೆ 10 ಗಂಟೆಗೆ ದುರ್ಗಾಹೋಮ, ವಾಸ್ತುಬಲಿ, ದಿಗ್ಬಲಿ ನಡೆಯಲಿದೆ. ಮೇ 29ರಂದು ಬೆಳಗ್ಗೆ 11.35ಕ್ಕೆ ದೇವಿಯ ಕೆಂಡದಾರ್ಚನೆ ನಡೆಯಲಿದ್ದು, ಮೇ 30ರ ಸಂಜೆ 5 ಗಂಟೆಗೆ ಓಕುಳಿ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.