ಬೆಂಕಿ ತಗುಲಿ ಇಬ್ಬರಿಗೆ ಗಾಯ
ಸೊರಬ: ರಸ್ತೆ ಬದಿಯ ಮರವೊಂದಕ್ಕೆ ಬೆಂಕಿ ತಗುಲಿ ಕ್ರಮೇಣ ರಸ್ತೆಗೆ ಬಿದ್ದಿದ್ದು, ಬೈಕ್ ಸವಾರರಿಗೆ ಗಾಯಗಳಾದ ಘಟನೆ ಚಂದ್ರಗುತ್ತಿ ಬಳಿ ಜರುಗಿದೆ. ಸೋಮವಾರ ಮಧ್ಯಾಹ್ನ ಹರೀಶಿ- ಮಂಗಳೂರು ಗ್ರಾಮದ ರವೀಶ್ ಮತ್ತು ಚಂದ್ರಶೇಖರ್ ಎಂಬುವವರು ಚಂದ್ರಗುತ್ತಿಗೆ ಬರುವಾಗ ಸಮೀಪದ ನ್ಯಾರ್ಸಿ ಬಳಿ ಈ ಘಟನೆ ನಡೆದಿದೆ. ಈ ಮೊದಲೇ ರಸ್ತೆ ಬದಿಯಲ್ಲಿನ ಅಕೇಶಿಯಾ ಮರದ ಬುಡಕ್ಕೆ ಬೆಂಕಿ ತಾಗಿ ಟೊಳ್ಳಾಗಿತ್ತು, ಬೈಕ್ ಮೇಲೆ ಉರುಳಿದೆ. ಇಬ್ಬರೂ ಗಾಯಗೊಂಡಿದ್ದಾರೆ.
ಮಹಿಳೆ ಕಾಣೆ
ಭದ್ರಾವತಿ: ತವರುಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಿಳೆಯೊಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದು ಕಾಣೆಯಾಗಿದ್ದಾರೆ ಎಂದು ಮಹಿಳೆಯ ಪತಿ ದೂರು ನೀಡಿದ್ದಾರೆ. ಮೇ 23ರಂದು ಕೆಲಸಕ್ಕೆ ಹೋದಾಗ ಹೇಳಿ ಹೋದವಳು ಇದುವರೆಗೂ ಹಿಂದುರಿಗಿ ಬಂದಿಲ್ಲವೆಂದು ವೆಂಕಟೇಶ ಎಂಬವರು ಹೊಸಮನೆ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.