ಭೂಚೇತನ ಮಾಹಿತಿ ರಥಕ್ಕೆ ಚಾಲನೆ
ಭದ್ರಾವತಿ: ತಾಲ್ಲೂಕಿನ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ಭೂ ಚೇತನ ಕಾರ್ಯಕ್ರಮದಡಿಯಲ್ಲಿ 2013-14ನೇ ಸಾಲಿನ ಭೂಚೇತನ ಕಾರ್ಯಕ್ರಮದ ಅಂಗವಾಗಿ ಲಗು ಪೋಷಕಾಂಶಗಳು, ಜೈವಿಕ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳ ಮಹತ್ವ ಮತ್ತು ಬಳಕೆಯ ಪ್ರಚಾರಕ್ಕಾಗಿ ಸಜ್ಜುಗೊಳಿಸಿದ ಭೂಚೇತನ ಮಾಹಿತಿ ರಥದ ಸ್ತಬ್ದಚಿತ್ರಕ್ಕೆ ಶಾಸಕ ಎಂ.ಜೆ.ಅಪ್ಪಾಜಿ ಚಾಲನೆ ನೀಡಿದರು.
ಸಹಾಯ ಕೃಷಿ ನಿರ್ದೇಶಕ ಸಿ.ಬಸವರಾಜಪ್ಪ, ಕೃಷಿಕ ಸಮಾಜದವರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಈ ಸಂದರ್ಭದಲ್ಲಿ ಹಾಜರಿದ್ದರು.