ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೆಸ್ ಕೋರ್ಸ್

Lingaraj Badiger
Updated On : 30 May 2013, 10:49 am

ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಒಂದು ವರ್ಷದ ಚೆಸ್ ಕೋರ್ಸ್ ಮತ್ತು ಕ್ವಿಜ್ ಕ್ಲಬ್ ಆರಂಭಿಸುತ್ತಿದೆ. ಹೊಸದಾಗಿ ಚೆಸ್ ಕಲಿಯುವವರಿಗೆ ಮತ್ತು ಈಗಾಗಲೇ ಚೆಸ್ ಆಡಲು ಕಲಿತಿರುವವರಿಗೂ  ಬೇರೆ ಬೇರೆ ಬ್ಯಾಚ್‌ಗಳಲ್ಲಿ ಹೇಳಿಕೊಡಲಾಗುತ್ತದೆ. ನಳಂದ ಕ್ವಿಜ್ ಕ್ಲಬ್‌ನ ತರಗತಿಗಳು ಪ್ರತಿ ಭಾನುವಾರ ನಡೆಯಲಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ. ಮಾಹಿತಿಗೆ ಮೊ- 99458 09662.
ಉಚಿತ ನೋಟ್ ಪುಸ್ತಕ ವಿತರಣೆ
ಶಿವಮೊಗ್ಗ: ಜಿಲ್ಲಾ ಮಡಿವಾಳ ಯುವ ವೇದಿಕೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಉಚಿತ ನೋಟ್ ಪುಸ್ತಕ ವಿತರಿಸಲು ನಿರ್ಧರಿಸಿದೆ. ಆಸಕ್ತ ವಿದ್ಯಾರ್ಥಿಗಳು ವೇದಿಕೆಗೆ ಅರ್ಜಿ ಸಲ್ಲಿಸಬೇಕು. ಮೊ-94487 74552ಗೆ ಸಂಪರ್ಕಿಸುವಂತೆ ಕೋರಿದ್ದಾರೆ.
ಸಂಘಕ್ಕೆ ಆಯ್ಕೆ
ಶಿವಮೊಗ್ಗ: ರಾಜ್ಯ ಸರ್ಕಾರದ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಜಿ. ಹಾಲೇಶ್ ಅಧ್ಯಕ್ಷರಾಗಿದ್ದಾರೆ. ಎಂ.ಎನ್. ವೆಂಕಟೇಶ್, ಗಂಗಾಧರ್, ಸುರೇಶ್ ಪಂಡಿತ್, ಮಹಾಲಿಂಗೇ ಗೌಡ, ಕೆ.ಆರ್. ಯೋಗೇಶ್ ನಾಯಕ್, ಜಯರಾಮ್, ಭೀಮನಾಯ್ಕ, ನಂಜುಂಡಸ್ವಾಮಿ, ದೇವರಾಜ, ನಾಗರಾಜ, ಮಂಜುನಾಥ್, ಪೆಂಚಾಲಯ್ಯ, ಗಣಪತಿ, ಸ್ವಾಮಿಗೌಡ ಮತ್ತು ಲಕ್ಷ್ಮಣಗೌಡ ನೇಮಕಗೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ. ಹಾಲೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement