ಯುವ ಜನಾಂಗ ಸಬಲೀಕರಣ ಶಿಬಿರ
ಶಿವಮೊಗ್ಗ: ವ್ಯಕ್ತಿ ವಿಕಾಸ ಕೇಂದ್ರವು 14ರಿಂದ 18 ವರ್ಷದೊಳಗಿನ ಯುವಕ- ಯುವತಿಯರಿಗಾಗಿ ಯುವ ಜನಾಂಗ ಸಬಲೀಕರಣ ಶಿಬಿರ ಆಯೋಜಿಸಿದೆ.
ಪ್ರಾಣಾಯಾಮ, ಸೂರ್ಯನಮಸ್ಕಾರ, ಯೋಗ-ಯೋಗಾಸನಗಳು, ಸರಳ ಧ್ಯಾನ, ಉಸಿರಾಟದ ಪ್ರಕ್ರಿಯೆ (ಸುದರ್ಶನ ಕ್ರಿಯೆ ಸಹಿತ), ಮಾನವೀಯ ಮೌಲ್ಯಗಳ ತರಬೇತಿ, ಅರಿವು ಹಾಗೂ ಇತ್ಯಾದಿಗಳ ಕುರಿತು ತರಬೇತಿ ನೀಡಲಾಗುತ್ತದೆ. ಜೂನ್ 3ರಿಂದ 8ರವರೆಗೆ ಉಷಾನರ್ಸಿಂಗ್ ಹೋಮ್ ಎದುರಿನ ರಸ್ತೆಯಲ್ಲಿರುವ ಕರಣ್ ಕಾನ್ಫರೆನ್ಸ್ ಹಾಲ್ನಲ್ಲಿ ಪ್ರತಿ ದಿನ ಸಂಜೆ 6ರಿಂದ 8ರವರೆಗೆ ಶಿಬಿರ ನಡೆಯುವುದು. ಮಾಹಿತಿಗೆ ಮೊ-9964072793.
ರಕ್ತದೊತ್ತಡ ಪರೀಕ್ಷೆ, ಮಾಹಿತಿ ಶಿಬಿರ
ಶಿವಮೊಗ್ಗ: ಸಹ್ಯಾದ್ರಿ ಸ್ನೇಹ ಸಂಘ 30ರಂದು ರಕ್ತದೊತ್ತಡ ಹಾಗೂ ಮಾಹಿತಿ ಸಭೆಯನ್ನು ಆಯೋಜಿಸಿದೆ. ಅಂದು ಬೆಳಿಗ್ಗೆ 7ರಿಂದ 8ರವರೆಗೆ ರಕ್ತದೊತ್ತಡ ಪರೀಕ್ಷೆ ನಡೆಯಲಿದ್ದು, 8ರಿಂದ 8.30ರವರೆಗೆ ಮಾಹಿತಿ ಸಭೆ ನಡೆಯುವುದು. ಮುಖ್ಯ ಅತಿಥಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣ ರೆಡ್ಡಿ, ಡಾ.ಎಸ್.ಎಸ್. ಚಂದ್ರಕಾಂತ್ ಪಾಲ್ಗೊಳ್ಳುವರು. ಸಂಘಟನೆಯ ಗೌರವ ಉಪಸ್ಥಿತಿ ಎಸ್.ಎಸ್. ಜ್ಯೋತಿಪ್ರಕಾಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಖಜಾಂಚಿ ಟಿ.ಆರ್. ಅಶ್ವತ್ಥನಾರಾಯಣ ಉಪಸ್ಥಿತರಿರಲಿದ್ದು, ಸಹ್ಯಾದ್ರಿ ಸ್ನೇಹ ಸಂಘದ ಅಧ್ಯಕ್ಷ ಡಾ.ಎ. ಸತೀಶ್ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.