ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಕಾಶವಾಣಿಯಲ್ಲಿ ಡಿ. ಮಂಜುನಾಥ ಸಂದರ್ಶನ

Lingaraj Badiger
Updated On : 31 May 2013, 11:13 am

ಶಿವಮೊಗ್ಗ: ಜೂನ್ 1 ಮತ್ತು 2ರಂದು ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಭಾಂಗಣ ಮತ್ತು ಕುವೆಂಪು ರಂಗಮಂದಿರದಲ್ಲಿ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದ ಸಿದ್ಧತೆ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅವರೊಂದಿಗೆ ಮೇ 31ರಂದು ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲಿ ಸಂದರ್ಶನ ಕಾರ್ಯಕ್ರಮ  ಪ್ರಸಾರವಾಗಲಿದೆ.
ಕಲಾಕೃತಿ ಪ್ರದರ್ಶನ
ಶಿವಮೊಗ್ಗ: ಜೂನ್ 1 ಮತ್ತು 2ರಂದು ಶಿವಮೊಗ್ಗದಲ್ಲಿ ನಡೆಯಲಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರಿಂದ ಚಿತ್ರಕಲಾಕೃತಿ ಪ್ರಾತ್ಯಕ್ಷಿಕೆ ಮತ್ತು ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲೆಯ ಉದಯೋನ್ಮುಖ ಕಲಾವಿದ ಬಿ.ಜೆ. ರಾಜಶೇಖರ್, ಕಾತ್ಯಾಯಿನಿ ಸಿ.ಎಸ್. ಗರಗ, ಅಶೋಕ ವಾಲೀಕಾರ್, ಚಿಕ್ಕಮಠ, ಟಿ.ವಿ. ಸುರೇಶ, ಐ.ಬಿ. ಬಬಲೇಶ್ವರ, ರಾಜೇಶ್, ವೆಂಕಟೇಶ್, ಎಚ್. ಸಾಗರ್, ಮಾಲತೇಶ್ ಜಿ.ಎನ್. ಪ್ರವೀಣ, ಸಂಜಯ ಕಲಾಕೃತಿಗಳ ಪ್ರಾತ್ಯಕ್ಷಿಕೆ ಮತ್ತು ಚಿತ್ರಗಳ ಪ್ರದರ್ಶನ ನಡೆಸಿಕೊಡಲಿದ್ದಾರೆ.
ಆಸಕ್ತರು ತಮ್ಮ ಇತ್ತೀಚಿನ ಆಯ್ದ 2-4 ಕಲಾಕೃತಿಗಳೊಂದಿಗೆ ಸಂಚಾಲಕಿ ಸಿ.ಎಸ್. ಕಾತ್ಯಾಯಿನಿ ಇವರ ಬಳಿ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಗಳಿಗಾಗಿ-9480205759.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement