ಮಧುಮೇಹ ತಪಾಸಣಾ ಶಿಬಿರ
ಶಿವಮೊಗ್ಗ: ಡಾ. ಜೈನ್ಸ್ ಹೆಲ್ತ್‌ಕೇರ್ ಸರ್ವಿಸಸ್‌ನಲ್ಲಿ ಜೂನ್ 1, 2 ಮತ್ತು 3ರಂದು ಬೆಳಿಗ್ಗೆ 8ರಿಂದ 11ಗಂಟೆವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಆಯುರ್ವೇದ ಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸರ್ವಿಸ್ ತಿಳಿಸಿದೆ. ವಿವರಗಳಿಗಾಗಿ- 9241034047.
ಸಂವಾದ ಕಾರ್ಯಕ್ರಮ
ಶಿವಮೊಗ್ಗ: ಜೆಎನ್‌ಎನ್‌ಸಿಇ ಕಾಲೇಜು ಆವರಣದಲ್ಲಿ ಜೂನ್ 2ರಂದು ಬೆಳಿಗ್ಗೆ 9 ಗಂಟೆಯಿಂದ 11ರ ವರೆಗೆ ಎಂಜಿನಿಯರಿಂಗ್ ಪ್ರವೇಶದ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಯಾವ ಕೋರ್ಸ್ ತೆಗೆದುಕೊಳ್ಳಬೇಕು, ಯಾವ ಕೋರ್ಸಿಗೆ ಹೆಚ್ಚು ಉದ್ಯೋಗ ಅವಕಾಶವಿರುತ್ತದೆ, ಯಾವ ಸಿಇಟಿ ರ್ಯಾಂಕಿಗೆ ಯಾವ ಕೋರ್ಸ್ ಕಾಲೇಜಿನಲ್ಲಿ (ಜೆಎನ್‌ಎನ್‌ಸಿಇ) ಪ್ರವೇಶ ಸಿಗಬಹುದು ಎಂದು ತಿಳಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಆರ್. ಶ್ರೀನಿವಾಸ್‌ರಾವ್ ಕುಂಟೆ ತಿಳಿಸಿದ್ದಾರೆ.
ವಿವರಗಳಿಗಾಗಿ- 08182 225541.