ವಾರ್ಷಿಕೋತ್ಸವ
ಶಿವಮೊಗ್ಗ: ಶ್ರೀ ಚೌಡೇಶ್ವರಿ ದೇವಿ ಅಭಿವೃದ್ಧಿ ಸಮಿತಿ ಮೇ 31ರಂದು ಚಾಲುಕ್ಯನಗರದ ಶ್ರೀ ಚೌಡೇಶ್ವರಿ ಅಮ್ಮನವರ 3ನೇ ವಾರ್ಷಿಕೋತ್ಸವ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ದೇವಿಗೆ ಕಲಾತತ್ವ ಹೋಮ ಮತ್ತು ಕುಂಭಾಭಿಷೇಕ ಮತ್ತು ಚಂಡಿಕಾಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿಲಿದೆ ಎಂದು ಸಮಿತಿಯ ಕಾರ್ಯದರ್ಶಿ ಸಿ.ಕೆ. ಬಾಲಚಂದ್ರ ತಿಳಿಸಿದ್ದಾರೆ.
ವಿಶ್ವ ಹಾಲು ದಿನ
ಶಿವಮೊಗ್ಗ: ಶಿವಮೊಗ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಜೂನ್ 1ರಂದು ಬೆಳಗ್ಗೆ 9 ಗಂಟೆಗೆ ವಿಶ್ವ ಹಾಲು ದಿನದ ಅಂಗವಾಗಿ ನಗರದಲ್ಲಿ ಹಾಲು ಉತ್ಪಾದಕರು, ನಂದಿನಿ ಹಾಲಿನ ಗ್ರಾಹಕರ ಜಾಥಾ ನಡೆಯಲಿದೆ. ನಂತರ 10.30ಕ್ಕೆ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರಿಂದ ಮೈಸೂರು ಪಾಕ್ ಹಾಗೂ ಮ್ಯಾಂಗೋ ಲಸ್ಸಿ ಬಿಡುಗಡೆ ಸಮಾರಂಭ ಇರುತ್ತದೆ ಎಂದು ಒಕ್ಕೂಟದ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.