ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

Lingaraj Badiger
Updated On : 1 Jun 2013, 10:59 am

ಶಿವಮೊಗ್ಗ: ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್ ಅವರ ಸರ್ವಾಧ್ಯಕ್ಷತೆಯಲ್ಲಿ ಶನಿವಾರದಿಂದ ಎರಡು ದಿನ ನಗರದಲ್ಲಿ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು. ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಈ ಸಮ್ಮೇಳನವು ನಗರದ ಕುವೆಂಪು ರಂಗಮಂದಿರ ಹಾಗೂ ಎನ್‌ಇಎಸ್ ಸಭಾಂಗಣದಲ್ಲಿ ನಡೆಯುವದು. ಮೊದಲ ದಿನ ಬೆಳಗಿನಿಂದಲೇ ರಂಗಮಂದಿರದಲ್ಲಿ ಕಾರ್ಯಕ್ರಮ ಆರಂಭವಾಗಲಿವೆ. ಮಧ್ಯಾಹ್ನ 3.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಸಂಜೆ 6.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯುವುದು. ನಂತರ ಗಂಗಾವತಿ ಬೀಚಿ ಪ್ರಾಣೇಶ್ ಅವರ ಕಾರ್ಯಕ್ರಮವಿದೆ.
ಸುದ್ದಿ ಸಂಕ್ಷೇಪ
ನಾಳೆ ಉಚಿತ ತಪಾಸಣಾ ಶಿಬಿರ
ಶಿವಮೊಗ್ಗ: ನಗರದ ಮೆಡಿಕೇರ್ ಹೆಲ್ತ್ ಸೆಂಟರ್‌ನಲ್ಲಿ ಜೂನ್ 2ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಸಲಹಾ ಶಿಬಿರ ಏರ್ಪಡಿಸಲಾಗಿದೆ. ಆಯುರ್ವೇದ ವಿಭಾಗದಲ್ಲಿ ಪೈಲ್ಸ್, ಫಿಜರ್, ಫಿಸ್ತುಲಾ ಮತ್ತಿತರ ಗುದರೋಗಗಳಿಗೆ ತಪಾಸಣೆ ಮಾಡಲಾಗುತ್ತದೆ ಎಂದು ಸೆಂಟರ್‌ನ ನಿರ್ದೇಶಕ ಡಾ. ಟಿ.ಆರ್. ಪ್ರಶಾಂತ್ ಕೇಕುಡ ತಿಳಿಸಿದ್ದಾರೆ. ವಿವರಗಳಿಗಾಗಿ- 08182-659589.
ಚಿಂತನಾ ಸಭೆ
ಶಿವಮೊಗ್ಗ: ಓದುಗರ ಚಾವಡಿ ಜೂನ್ 2ರಂದು ಸಂಜೆ 6.30ಕ್ಕೆ ಪಂಚವಟಿ ಕಾಲೋನಿಯಲ್ಲಿನ ಮಧು ಕೃಪಾದಲ್ಲಿ ವಾಲ್ಮೀಕಿ ರಾಮಾಯಣದ ಅಧ್ಯಾಯಗಳಾದ ಅರಣ್ಯಕಾಂಡ ಮತ್ತು ಕಿಷ್ಕಿಂಧಾಕಾಂಡದಲ್ಲಿ ಶ್ರೀರಾಮನ ಪಾತ್ರದ ಬಗ್ಗೆ ಚಿಂತನಾ ಸಭೆ ಏರ್ಪಡಿಸಲಾಗಿದೆ. ಆಸಕ್ತ ಓದುಗರು ಪುಸ್ತಕ ಓದಿ ಓದುಗರ ಚಾವಡಿಯಲ್ಲಿ ಪಾಲ್ಗೊಳ್ಳಬಹುದು. ಪುಸ್ತಕ ಪಡೆಯಲು ಪಿ.ಶಿವಣ್ಣ ಅವರನ್ನು ಸಂಪರ್ಕಿಸಬಹುದು. ವಿವರಗಳಿಗಾಗಿ-9449060116.
ಫಲಾನುಭವಿಗಳ ಪಟ್ಟಿ ಪ್ರಕಟ
ಶಿವಮೊಗ್ಗ: ಶಿಕಾರಿಪುರ ಪುರಸಭೆಯು 2012-13ನೇ ಸಾಲಿನ ಶೇ. 22.75ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣ ಯೋಜನೆ ಮತ್ತು ಶೇ.7.25ರ ಇತರ ಬಡಜನರ ಕಲ್ಯಾಣ ಯೋಜನೆ ಮತ್ತು ಶೇ.3ರ ಅಂಗವಿಕಲರ ಕಲ್ಯಾಣ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳಿಗಾಗಿ ಆರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಶಿಕಾರಿಪುರ ಪುರಸಭಾ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಸೌಲಭ್ಯ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement