ಸಚಿವರಿಂದ ಪ್ರಗತಿ ಪರಿಶೀಲನೆ
ಚಿತ್ರದುರ್ಗ: ರಾಜ್ಯ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅಧ್ಯಕ್ಷತೆಯಲ್ಲಿ ಶನಿವಾರ ಬೆಳಗ್ಗೆ 10 ಕ್ಕೆ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಚಿತ್ರದುರ್ಗ: ರಾಜ್ಯ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಶನಿವಾರ ಬೆಳಗ್ಗೆ 10 ಕ್ಕೆ ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ಮಧ್ಯಾಹ್ನ 12 ಕ್ಕೆ ಸಾರ್ವಜನಿಕರ ಭೇಟಿ, 1.30 ಕ್ಕೆ ಭೀಮಸಮುದ್ರಕ್ಕೆ ಭೇಟಿ ನೀಡಿ ದಿ.ಬಿ.ಟಿ. ಚನ್ನಬಸಪ್ಪನವರ ಹಾಗೂ ಜಿ.ಎಸ್. ಮಂಜುನಾಥ್ ಅವರ ಮನೆಗೆ ಭೇಟಿ ನೀಡುವರು. 2 ಕ್ಕೆ ಸಿರಿಗೆರೆಗೆ ಭೇಟಿ ನೀಡಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡುವರು. ಸಂಜೆ 4 ಕ್ಕೆ ಮಧುರೆ ಬಿ.ವಿ. ನಗರದ ಭಗೀರಥ ಗುರುಪೀಠದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ಭೇಟಿ ಮತ್ತು ಸಂಜೆ 5 ಕ್ಕೆ ಹೊಸದುರ್ಗದಲ್ಲಿ ಕಾಗಿನೆಲೆ ಕನಕ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಸಂಜೆ 5.40 ಕ್ಕೆ ಬೆಲಗೂರಿನಲ್ಲಿ ಬಿಂದು ಮಾಧವ ಸ್ವಾಮಿಗಳ ಭೇಟಿ ಮಾಡಿ ಶಾಸಕ ಬಿ.ಜಿ. ಗೋವಿಂದಪ್ಪನವರ ಮನೆಗೆ ಭೇಟಿ ನೀಡಿ ಸಂಜೆ ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡುವರು. ಜೂನ್ 2 ರಂದು ಬೆಳಗ್ಗೆ 10 ಕ್ಕೆ ಹೊರಕೆರೆದೇವರಪುರದಲ್ಲಿ ಸಾರ್ವಜನಿಕ ಸಭೆ, 11.30 ಕ್ಕೆ ತಾಳ್ಯ, ಮ.1 ಕ್ಕೆ ಹೊಳಲ್ಕೆರೆ, ಮ.2.30 ಕ್ಕೆ ರಾಮಗಿರಿ, ಸಂಜೆ 4 ಕ್ಕೆ ಮಲ್ಲಾಡಿಹಳ್ಳಿ ಹಾಗೂ ಸಂಜೆ 5.30 ಕ್ಕೆ ಚಿಕ್ಕಜಾಜೂರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ರಾತ್ರಿ 10.30 ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
--