ನಮೋ ರ್ಯಾಲಿಗೆ ಕಾರ್ಯಕರ್ತರ ನೋಂದಣಿ
ಶಿವಮೊಗ್ಗ: ನವೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯುವ ನಮೋ ರ್ಯಾಲಿ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಸಮಿತಿ ಕಾರ್ಯಕರ್ತರ ನೋಂದಣಿ ಅಭಿಯಾನ ಆರಂಭಿಸಿತು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಅಭಿಯಾನದ ಉದ್ಘಾಟನೆ ಸಂದರ್ಭದಲ್ಲಿ ಜನ ಸಂಘದ ಹಿರಿಯರಾದ ಅನಂತ ಪದ್ಮನಾಭ ಭಟ್, ಎಸ್.ಬಿ. ರಾಮಸ್ವಾಮಿ, ಬಿಜೆಪಿ ಮುಖಂಡ ಗಿರೀಶ್ ಪಟೇಲ್, ನಗರ ಬಿಜೆಪಿ ಅಧ್ಯಕ್ಷ ಎಸ್.ಜ್ಞಾನೇಶ್ವರ್ ಹಾಜರಿದ್ದರು. ಮುಖಂಡ ಎಸ್.ಎನ್. ಚನ್ನಬಸಪ್ಪ, ಎಸ್.ರಮೇಶ್, ಬಿ.ಕೆ. ಶ್ರೀನಾಥ್, ಡಿ.ಎಸ್.ಅರುಣ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ: ಬಿಜೆಪಿ ಶಿವಮೊಗ್ಗ ನಗರ ಸಮಿತಿ ಪದಾಧಿಕಾರಿಗಳನ್ನು ಪಕ್ಷದ ನಗರಾಧ್ಯಕ್ಷರಾದ ಎಸ್. ಜ್ಞಾನೇಶ್ವರ್ ನೇಮಕ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಬೆಲಗೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಲಕ್ಷ್ಮಣ್, ಕಾರ್ಯದರ್ಶಿಯಾಗಿ ಡಿ. ಮೋಹನ ರೆಡ್ಡಿ, ಸುರೇಂದ್ರ ಕಸೆಟ್ಟಿ, ಸೆಲ್ವಂ ಅವರನ್ನು ನೇಮಿಸಲಾಗಿದೆ. ಎನ್.ವೆಂಕಟೇಶ್, ಉಮಾಮೂರ್ತಿ, ಗೀತಾ, ಯಶೋಧ ಸಮಿತಿಯ ಸದಸ್ಯರಾಗಿದ್ದರೆ, ಎ.ಜೆ. ಶ್ರೀನಿವಾಸ್, ಕೆ.ಟಿ. ಶ್ರೀನಿವಾಸ ರಾವ್, ಕುಮಾರ, ರಘು ನಾಯ್ಕು, ಎನ್. ಸುಧೀರ್ ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.