ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜಹಂಸ ಬಸ್ ಪಲ್ಟಿ ಮೂವರು ಸಾವು

Mainashree
Updated On : 1 Nov 2013, 10:51 am

ಸಾಗರ: ತಾಲೂಕಿನ ಜೋಗಜಲಪಾತ ಸಮೀಪದ ಜೋಗಿಮಠ ತಿರುವಿನಲ್ಲಿ ಕೆಎಸ್ಸಾರ್ಟಿಸಿ ರಾಜಹಂಸ ಬಸ್ ಪಲ್ಟಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ ಕುಮಟಾಕ್ಕೆ ಹೊರಟಿದ್ದ ರಾಜಹಂಸ ಬಸ್ ಜೋಗಿಮಠ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿ ಹೊಡೆದಿದೆ. ಬಸ್ ಪಲ್ಟಿ ಹೊಡೆದ ರಭಸಕ್ಕೆ ಕುಮಟಾದ ಕಿರಣ್ (30), ಮಾಸ್ತಮ್ಮ (60) ಹಾಗೂ ಹೊನ್ನಾವರದ ನಿಲೇಶ್ (26) ಎಂಬವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರ ಪೈಕಿ ಶೈಲೇಶ್ ಕುಮಟಾ, ವಿನಾಯಕ ಕುಮಟಾ, ಶ್ವೇತಾ ಹೆಗಡೆ ಗೋಕರ್ಣ, ಬಲೀಂದ್ರಪ್ಪ ಕುಮಟಾ ಹಾಗೂ ಗಣಪತಿ ಕುಮಟಾ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರಿಗೆ ಸಾಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನಲ್ಲಿ 45 ರಿಂದ 50 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಹುತೇಕರು ಉತ್ತರ ಕನ್ನಡ ಭಾಗದವರಾಗಿದ್ದು, ದೀಪಾವಳಿ ಹಬ್ಬ ಆಚರಿಸಲು ಬೆಂಗಳೂರಿನಿಂದ ತಮ್ಮ ಊರಿಗೆ ಹೊರಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement