ಹಂದಿ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಪಶು ವೈದ್ಯಕೀಯ ಮಹಾವಿದ್ಯಾಲಯವು ನ. 7ರಂದು ವಿನೋಬ ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈಜ್ಞಾನಿಕ ಹಂದಿ ಸಾಕಣೆ ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ.
ಜಿಲ್ಲೆಯ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ತರಬೇತಿ ಅವಧಿಯಲ್ಲಿ ಹಂದಿಯ ತಳಿಗಳು, ಹಂದಿಯ ಮನೆ ನಿರ್ಮಾಣ, ಹಂದಿಯ ಪಾಲನೆ, ಕಾಯಿಲೆಗಳು ಮತ್ತು ಮುಂಜಾಗ್ರತಾ ಕ್ರಮಗಳು, ಹಂದಿ ಆಹಾರ, ಲಾಭದಾಯಕ ಆದಾಯ, ಉತ್ಪನ್ನ ಚಟುವಟಿಕೆಗಳಾಗಿ ಹಂದಿ ಸಾಕಾಣೆಯ ಆಯ್ಕೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.
ಸೀಮಿತ 30 ಶಿಬಿರಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದ್ದು, ಆಸಕ್ತರು ತಮ್ಮ ಹೆಸರನ್ನು ನ. 6ರೊಳಗಾಗಿ ಡಾ. ಕೆ.ಸಿ. ವೀರಣ್ಣ, ಮುಖ್ಯಸ್ಥರು, ವಿಸ್ತರಣಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇವರಲ್ಲಿ ನೋಂದಾಯಿಸಿಕೊಳ್ಳಬಹುದು. ವಿವರಗಳಿಗಾಗಿ ದೂ. 08182-651002, ಅಥವಾ ಡಾ.ಸತೀಶ್ ಜಿ.ಎಂ. (ಮೊ. 9448224595)ಅನ್ನು ಸಂಪರ್ಕಿಸುವಂತೆ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.