ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯನೂರಿನಲ್ಲಿ ಪದವಿ ಕಾಲೇಜು, ಪ್ರಕ್ರಿಯೆ ಆರಂಭ

Vishwanath S
Updated On : 4 Nov 2013, 12:16 pm

ಶಿವಮೊಗ್ಗ: ಆಯನೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ತಯಾರಿ ಆರಂಭವಾಗಿದೆ.
 ಮುಂದಿನ ಶೈಕ್ಷಣಿಕ ವರ್ಷದಿಂದಲೇ(2014-15) ತರಗತಿಗಳು ಆರಂಭವಾಗಲಿದ್ದು, ತಾತ್ಕಾಲಿಕವಾಗಿ ಪದವಿ ಪೂರ್ವ ಕಾಲೇಜಿನ ಕೊಠಡಿಗಳನೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲ: ಆಯನೂರಿಗೆ ಪದವಿ ಕಾಲೇಜು ಬೇಕೆಂಬುದು ಹಲವು ದಶಕಗಳ ಬೇಡಿಕೆ. ಆಯನೂರು ಸೇರಿದಂತೆ ಕುಂಸಿ, ಹಾರ್ನಹಳ್ಳಿ ಭಾಗದ ಹತ್ತು ಹಲವು ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಶಿವಮೊಗ್ಗಕ್ಕೆ ಪ್ರತಿದಿನ ಪಯಣಿಸಬೇಕಾದ ಅನಿವಾರ್ಯತೆ ಇತ್ತು. ಇದೀಗ ಆಯನೂರಿನಲ್ಲೇ ಕಾಲೇಜು ಆರಂಭವಾಗುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಾಕಷ್ಟು ಅನುಕೂಲವಾಗಲಿದೆ.
 ಪ್ರತಿ ದಿನ ಶಿವಮೊಗ್ಗಕ್ಕೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಈ ಭಾಗದ ಹೆಚ್ಚಾಗಿ ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣದಿಂದ ವಂಚಿತರಾಗಿದ್ದರು. ಇದೀಗ ಆಯನೂರಿನಲ್ಲಿ ಕಾಲೇಜು ಆರಂಭಗೊಳ್ಳುವುದರಿಂದ ಸುಮಾರು 250-300 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉನತ ಶಿಕ್ಷಣ ಪಡೆಯಲಿದ್ದಾರೆ.
ಪ್ರಕ್ರಿಯೆ ಆರಂಭ: ನೂತನ ಕಾಲೇಜಿಗೆಂದು ಈಗಾಗಲೇ ಆಯನೂರಿನಲ್ಲಿ 25ಎಕರೆ ವಿಶಾಲ ಜಾಗವನು ಮೀಸಲಿಡಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣವಾಗಲು ಸಮಯಾವಕಾಶ ಬೇಕಾಗುವುದರಿಂದ ಇಲ್ಲಿನ ಪ್ರೌಢಶಾಲೆ ಆವರಣದಲ್ಲಿರುವ ಪದವಿಪೂರ್ವ ಕಾಲೇಜಿನ ಕಟ್ಟಡದಲ್ಲೇ ಪದವಿ ತರಗತಿಯನು ಆರಂಭಿಸುವ ಇಂಗಿತವನು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಆಯನೂರಿಗೆ ಭೇಟಿಕೊಟ್ಟ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿದರು.  
 ಪರಿಶೀಲನೆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ನೋಡಲ್ ಅಧಿಕಾರಿ ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಎಡಬ್ಲೂ ಹರೀಶ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯ ನರಸಿಂಹ, ಪ್ರಭಾಕರ್, ಜಯರಾಮ್, ಕುಪೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ರಾಜಶೇಖರ್, ಕಾಲೇಜಿನ ಉಪನ್ಯಾಸಕ ನರಸಿಂಹಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement