ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈದ್ಗಾ ಮೈದಾನ ಕಾಮಗಾರಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

Vishwanath S
Updated On : 4 Nov 2013, 12:17 pm

ಶಿವಮೊಗ್ಗ: ಹೊಳಲೂರು ಗ್ರಾಮದ ಈದ್ಗಾ ಮೈದಾನದ ಅಭಿವೃದ್ಧಿ ಕಾಮಗಾರಿಗೆ ನರೇಗಾ ಯೋಜನೆಯಲ್ಲಿ ಬಿಡುಗಡೆಯಾಗಿರುವ ಹಣವನು ಗ್ರಾಮ ಪಂಚಾಯಿತಿ ಎಂಜಿನಿಯರ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸುನಿ ಜಾಮಿಯಾ ಮಸೀದಿ ಅಧ್ಯಕ್ಷ ಎಚ್.ಕೆ. ಜಹೀರುದ್ಧೀನ್ ಆರೋಪಿಸಿದ್ದಾರೆ.
 ಈದ್ಗಾ ಮೈದಾನದ ಅಭಿವೃದ್ಧಿಗೆ ನರೇಗಾ ಯೋಜನೆಯಲ್ಲಿ ಅಂದಾಜು 1.53 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 11,850 ಸಾವಿರ ರುಪಾಯಿ ಖರ್ಚು ಮಾಡಿದ್ದು, ಉಳಿದ 1,26,255 ಲಕ್ಷ ರುಪಾಯಿಗಳನು ವ್ಯವಸ್ಥಿತ ದಾಖಲೆಗಳನು ಸೃಷ್ಟಿಸಿ, ಭ್ರಷ್ಟಾಚಾರವೆಸಗಲಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಸುಳ್ಳು ದಾಖಲೆ: ಈದ್ಗಾ ಮೈದಾನದ ರಸ್ತೆ ಮತ್ತು ನೆಲಸಮತಟ್ಟು ಕಾಮಗಾರಿಯನು ಜೆಸಿಬಿ ಮೂಲಕ ನಿರ್ವಹಿಸಿ 20-25 ಸಾವಿರ ರುಪಾಯಿ ವೆಚ್ಚ ಮಾಡಿದ್ದಾರೆ.
 ಆದರೆ, ಇದಕ್ಕೆ 900 ಮಾನವ ದಿನಗಳು ಎಂದು ಸುಳ್ಳು ದಾಖಲೆ ಸೃಷ್ಟಿಸಿ, 1,38,105 ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ. ಕಾಮಗಾರಿ ನಿರ್ವಹಿಸಿದ ಸ್ಥಳ ಗುಡ್ಡದಂತಿದ್ದು ಸಂಪೂರ್ಣವಾಗಿ ಗಟ್ಟಿಮಣ್ಣಿನಿಂದ ಕೂಡಿದೆ. ಅಕುಶಲ ಕೂಲಿ ಕಾರ್ಮಿಕರಿಂದ ನಿರ್ವಸದೇ ಜೆಸಿಬಿಯನು ಬಳಸಿರುವುದು ದೃಢಪಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ.
 ಈ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಮಗಿಸಿಲ್ಲ. ಅಲ್ಲದೇ, ಕಳಪೆ ಮಟ್ಟದಾಗಿದೆ.
 ಆದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ಈ ಬಗ್ಗೆ ಕೂಡಲೇ ಕ್ರಮಕೈಗೊಂಡು, ಎಂಜಿನಿಯರ್, ಗ್ರಾ.ಪಂ.ಕಾರ್ಯದರ್ಶಿ, ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement