ಕಂದಕಕ್ಕೆ ಬಿದ್ದ ಆಟೋ: ತಪ್ಪಿದ ಭಾರೀ ಅವಘಡ
ಶಿವಮೊಗ್ಗ: ಮಿತಿ ಮೀರಿ ಪ್ರಯಾಣಿಕರನು ಹೊತ್ತೊಯ್ಯುತ್ತಿದ್ದ ಆಟೋವೊಂದು ಭಾನುವಾರ ಹೊಸೂಡಿ ಚಿಕ್ಕೆರೆ ಕೆರೆ ಪಕ್ಕದ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.
ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಧ್ಯಾಹ 2.30ರ ಸುಮಾರಿನಲ್ಲಿ ಹೊಸೂಡಿ ಚಿಕ್ಕೆರೆ ಒಡ್ಡಿನ ಮೇಲೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳದ ಕಂದಕಕ್ಕೆ ಬಿತ್ತು. ಆಟೋ ಚಾಲಕ ಕಾನೂನು ಬಾಹಿರವಾಗಿ ಶಿವಮೊಗ್ಗದಿಂದ ಒಂಬತ್ತು ಪ್ರಯಾಣಿಕರನು ಹೊಸೂಡಿಯತ್ತ ಕೊಂಡೊಯ್ಯುತ್ತಿದ್ದ.
ಮೋರಿಗೆ ಡಿಕ್ಕಿ: ಚಾಲಕ ತನ ಸೀಟಿನಲ್ಲಿ ಅಕ್ಕ-ಪಕ್ಕವೂ ಪ್ರಯಾಣಿರನು ಕುಳ್ಳಿರಿಸಿಕೊಂಡಿದ್ದ. ಚಿಕ್ಕೆರೆ ಸಮೀಪ ರಸ್ತೆ ಸ್ವಲ್ಪ ತಿರುವು ಹಾಗೂ ಇಳಿಜಾರು ಇದ್ದಿದ್ದರಿಂದ ಚಾಲಕನಿಗೆ ಸ್ಟಿಯರಿಂಗ್ ತಿರುಗಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಅಲ್ಲಿಯೇ ಮೋರಿಯೊಂದು ಇದ್ದಿದ್ದರಿಂದ ಆ ಮೋರಿಗೆ ಅಟೋ ಡಿಕ್ಕಿ ಹೊಡೆದು ಬದಿಯ ಆಳಕ್ಕೆ ಬಿತ್ತು.
ಅದರ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐವರಿಗೆ ಕೈಕಾಲು, ಸೊಂಟ ಮುರಿತ, ತಲೆಗೆ ಪೆಟ್ಟು ಇತ್ಯಾದಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅವರಿಗೆ ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿ ಅವರವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಘಟನೆ ನಡೆದ ಕೂಡಲೇ ಚಾಲಕ ಪರಾರಿಯಾಗಿದ್ದಾನೆ.
ಸಂಚಾರಿ ಠಾಣಾ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ಹಾಗೂ ಎ.ಎಸ್.ಐ. ಪರಮೇಶ್ವರಪ್ಪ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ.