ಸರ್ಕಾರಿ ಬಸ್ಸು ಸೇವೆ ಆರಂಭಿಸಿ
ಸಾಗರದಲ್ಲಿ ಸರ್ಕಾರಿ ನಗರ ಸಂಚಾರಿ ಸೇವೆ ಆರಂಭವಾಗಬೇಕೆಂಬುದು ನಗರ ವಾಸಿಗಳ ಬಹುದಿನಗಳ ಬೇಡಿಕೆ. ನಗರ ಸಾರಿಗೆ ಆರಂಭಿಸಲು 2013ರಲ್ಲೇ ಆರ್ಟಿಓ ಪರವಾನಗಿ ನೀಡಿದ್ದು, ಕೆಎಸ್ಆರ್ಟಿಸಿ ಅಧಿಕಾರಿಗಳು ನಗರದಲ್ಲಿ ಸರ್ವೆ ಕಾರ್ಯ ನಡೆಸಿದ್ದರು. ಆದರೂ, ಈ ವರೆಗೆ ನಗರ ಸಾರಿಗೆ ಸೇವೆ ಆರಂಭಿಸಿಲ್ಲ. ಇದರ ಹಿನೆಲೆ ಏನೆಂಬುದು ಅರ್ಥವಾಗುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು. ತಡಮಾಡದೇ ಆರಂಭಿಸಬೇಕು. ಸಾಗರವು ನಗರಸಭೆಯಾಗಿ ಪವಿರ್ತನೆಗೊಂಡು ಆರು ವರ್ಷಗಳೇ ಕಳೆದಿವೆ. 31 ವಾರ್ಡ್ಗಳನೊಳಗೊಂಡ ಸಾಗರ ಪಟ್ಟಣವು ತನ ಸುತ್ತಮುತ್ತಲು ಅನೇಕ ಪ್ರವಾಸಿ ತಾಣಗಳನು ಹೊಂದಿದೆ. ಕೃಷಿ ಉತ್ಪನ ಮಾರುಕಟ್ಟೆ ಸಮಿಯ ಪ್ರಾಂಗಣವೂ ಇದೆ. ಪಟ್ಟಣದ ಹಿತೃದೃಷ್ಟಿಯಿಂದ ನಗರ ಸಾರಿಗೆಯ ಅಗತ್ಯವಿದೆ ಎಂಬುದು ಅಧಿಕಾರಿಗಳು ಮನಗಾಣಬೇಕು.
- ಶ್ರೀಧರ, ಸಾಗರ
ರುದ್ರಭೂಮಿ ಜಾಗ ಸಂರಕ್ಷಿಸಿ
ಸಾಗರ ತಾಲೂಕು ಆನಂದಪುರಂ ನೆರೆಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ನಂ.159ರಲ್ಲಿ ಹಿಂದೂ ರುದ್ರಭೂಮಿಗೆ ಜಾಗವನು ಮೀಸಲಿಡಲಾಗಿತ್ತು. ಗ್ರಾಮ ಪಂಚಾಯಿತಿಯೇ ನಾಲ್ಕು ಎಕರೆ ಜಾಗವನು ರುದ್ರಭೂಮಿಗೆಂದು ನಿರ್ಣಯಿಸಿ ಮೀಸಲಿಟ್ಟಿತ್ತು. ಆದರೆ, ಇತ್ತೀಚೆಗೆ ಕೆಲವರು ಭೂಗಳ್ಳರು ಈ ಭೂಮಿಯನು ಒತ್ತುವರಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಹೆಸರಿಗೆ ಖಾತೆ ಆಗಿದೆ ಎಂದು ಹೇಳಿಕೊಳ್ಳುತ್ತ ಭೂಮಿ ಕಬಳಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ತಕ್ಷಣವೇ ಕ್ರಮಕೈಗೊಂಡು ಭೂಮಿ ರಕ್ಷಿಸಬೇಕು. ಇಲ್ಲಿ ರುದ್ರಭೂಮಿ ಕೈಬಿಟ್ಟುಹೋದರೆ, ಗ್ರಾಮದ ವಾಸಿಗಳಿಗೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆಯಾಗಲಿದೆ.
- ದಿನೇಶ, ಆನಂದಪುರಂ
ಖಾಸಗಿ ವಾಹನಗಳಿಗೇಕೆ ಸರ್ಕಾರಿ ಬೋರ್ಡ್
ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳು ಗುತ್ತಿಗೆ ಆಧಾರದ ಮೇಲೆ ಖಾಸಗಿ ವಾಹನಗಳನು ಪಡೆದುಕೊಂಡಿವೆ. ಆದರೆ, ಈ ವಾಹನಗಳು ನಿಯಮಗಳ ಉಲ್ಲಂಘನೆ ಮಾಡಿ ಸರ್ಕಾರಿ ಬೋರ್ಡ್ ಹಾಕಿಕೊಂಡು ತಿರುಗುತ್ತಿವೆ. ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದರೂ ಉದಾಸೀನ ಮಾಡುತ್ತಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸರ್ಕಾರಿ ಕಚೇರಿ ಅವಧಿ, ಈ ಅವಧಿ ನಂತರವೂ ಗುತ್ತಿಗೆ ಆಧಾರದಲ್ಲಿ ಓಡುವ ಗಾಡಿಗಳು ಸರ್ಕಾರಿ ಸೇವೆಯಲ್ಲೇ ಬೋರ್ಡ್ ತಗುಲಿಸಿಕೊಂಡು ಅಕ್ರಮಗಳನು ನಡೆಸುತ್ತಿವೆ. ಪ್ರತಿ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸರ್ಕಾರಿ ಬೋರ್ಡ್ ತೆಗೆಸಿಹಾಕಬೇಕು.
- ಫ್ರಾನ್ಸಿಸ್ ದೇವದಾನಂ, ವಿನೋಬನಗರ
ವಾಣಿಜ್ಯ ಚಟುವಟಿಕೆಗೆ ಅನುಮತಿ ಬೇಡ
ಶಿವಮೊಗ್ಗ ಶೇಷಾದ್ರಿ ಪುರಂ ಬಳಿ ಖಾಲಿ ಇರುವ ಖಾಸಗಿ ನಿವೇಶನದಲ್ಲಿ ಸರ್ಕಲ್, ಪ್ರದರ್ಶನ ಮೇಳ ಇತ್ಯಾದಿ ಆಯೋಜನೆಗೆ ಅವಕಾಶ ಕೊಡಬಾರದು. ಈ ನಿವೇಶನದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕೊಡುವುದರಿಂದ ಸ್ಥಳೀಯ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಾಗರಿಕರ ಸಮಸ್ಯೆಯನು ಗಮನದಲ್ಲಿಟ್ಟುಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ನಿರ್ಧಾರ ಬದಲಿಸಬೇಕು. ಇಲ್ಲವಾದರೆ ಕಾನೂನಾತ್ಮಕ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ.
- ಶೇಷಾದ್ರಿಪುರಂ ನಾಗರಿಕರು