ಸಾಧಕರನು ಪ್ರೋತ್ಸಾಹಿಸದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ
ಸಾಗರ: ನಮ್ಮ ನಡುವೆ ತಮ್ಮಷ್ಟಕ್ಕೆ ಸಾಮಾಜಿಕ, ಶೈಕ್ಷಣಿಕ, ಕಲೆ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸಾಕಷ್ಟು ಜನರಿದ್ದಾರೆ. ಅಂತಹವರನು ಪ್ರೋತ್ಸಾಹಿಸದೆ ಹೋದರೆ ಆತ್ಮವಂಚನೆಯಾಗುತ್ತದೆ. ರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ಅಂತಹ ಸಾಧಕರನು ಗುರುತಿಸಿ ಗೌರವಿಸುವುದರಿಂದ ಇತರರು ಇವರಿಂದ ಪ್ರೇರೆಪಣೆಗೊಳ್ಳುತ್ತಾರೆ ಎಂದು ಉಪವಿಭಾಗಾಧಿಕಾರಿ ಡಾ. ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಗರಸಭೆ ಕನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನು ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನು ಸನ್ಮಾನಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ ಬೆಳೆಸಿ: ಕನಡನಾಡು ಸಮೃದ್ಧವಾಗಿ ಬೆಳೆಯುವಲ್ಲಿ ಅನೇಕರ ಶ್ರಮವಿದೆ. ಅವರ ಶ್ರಮದ ಪ್ರತಿಫಲ ನಮಗೆ ಸಿಕ್ಕಿದೆ. ಅದನು ನಾವು ಸದ್ವಿನಿಯೋಗ ಮಾಡಿಕೊಳ್ಳಬೇಕು. ನಾಡಿನ ವಿಶಿಷ್ಟತೆಯ ಪ್ರತೀಕವಾದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ನುಡಿಯನು ಕಟ್ಟುವ ಕೆಲಸದಲ್ಲಿ ನಾವೆಲ್ಲ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಿಂದ ಕೆ.ಎ.ಕುಮಾರಸ್ವಾಮಿ ಕೊಪ್ಪ, ಸಾಹಿತ್ಯ ಕ್ಷೇತ್ರದಿಂದ ವಿ.ಗಣೇಶ್, ರಂಗಭೂಮಿ ಕ್ಷೇತ್ರದಿಂದ ಪ್ರತಿಭಾ ರಾಘವೇಂದ್ರ ಹಾಗೂ ಕಲಾ ಕ್ಷೇತ್ರದಿಂದ ಸತೀಶ್ ಅವರನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ., ಪಿಯುಸಿ. ಪದವಿ, ಸಾತಕೋತ್ತರ ಪದವಿ ಹಾಗೂ ಡಿಪ್ಲಮೋ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಗಳನು ಪುರಸ್ಕರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ವಿವಿಧ ಶಾಲೆಯ ವಿದ್ಯಾಥರ್ಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ತಹಶೀಲ್ದಾರ್ಸಾಜಿದ್ ಅಹ್ಮದ್ಮುಲ್ಲಾ, ನಗರಸಭೆ ಪ್ರಭಾರಿ ಪೌರಾಯುಕ್ತ ಪೂವಯ್ಯ, ತಾಲ್ಲೂಕು ಕನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಸಕರಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ನಾಗಭೂಷಣ್ ಇನಿತರರು ಹಾಜರಿದ್ದರು.
ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್ಸ್ವಾಗತಿಸಿದರು. ಸಂತೋಷ್ ಆರ್. ಶೇಟಟ್ಹಾಗೂ ಎಸ್.ಪಿ.ದೇವರಾಜ್ ಅಭಿನಂದನಾ ಪತ್ರ ವಾಚಿಸಿದರು. ಕೆ.ಎನ್.ಗಾವಡಿ ವಂದಿಸಿದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.