ಅಭಿವೃದ್ಧಿ ಹಿನ್ನಡೆ: ನಗರಸಭೆಗೆ ಮುತ್ತಿಗೆ ಎಚ್ಚರಿಕೆ
ಶಿವಮೊಗ್ಗ: ನಗರದ ಕಾಮಾಕ್ಷಿ ರಸ್ತೆಯ 1 ಮತ್ತು 2ನೇ ಕ್ರಾಸ್ ಮತ್ತು ಸವಾರ್ ಲೈನ್ ರಸ್ತೆಗಳ ಅಭಿವೃದ್ಧಿಯಲ್ಲಿ ನಗರಸಭೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಾಧುಶೆಟ್ಟಿ ಯುವಕ ಸಂಘ ಆರೋಪಿಸಿದೆ. ಕಾಮಾಕ್ಷಿ ರಸ್ತೆಯ 1 ಮತ್ತು 2ನೇ ಕ್ರಾಸ್ರ್ಸ್ತೆಗಳ ಕಾಂಕ್ರೀಟಟ್ರಸ್ತೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದರೆ, ಸ್ಥಳೀಯ ನಗರಸಭೆ ಯಾವುದೇ ಕ್ರಮಕೈಗೊಂಡಿಲ್ಲ. ನೂತನವಾಗಿ ಆಯ್ಕೆಯಾದ ನಗರಸಭಾ ಸದಸ್ಯರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಭಿವೃದ್ಧಿ ಕಾರ್ಯಕೈ ಕ್ರಮಕೈಗೊಂಡಿಲ್ಲ. ಒಂದು ರಸ್ತೆಗೆ ಕಾಂಕ್ರೀಟ್ ಹಾಕಿದ್ದರೂ ಫುಟ್ಪಾತ್ ನಿರ್ಮಾಣ ಮಾಡಿಲ್ಲ. ಈ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯಿಂದಾಗಿ ಗುಂಡಿ ಬಿದಿದ್ದು, ಚರಂಡಿಗಳು ನಿರ್ಮಾಣವಾಗಿಲ್ಲ ಎಂದು ಸಂಘ ದೂರಿದೆ.
ಕ್ರಮ ಕೈಗೊಂಡಿಲ್ಲ: 2ನೇ ಕ್ರಾಸ್ನ್ ರಸ್ತೆಯಲ್ಲಿ ಶ್ರೀರಾಮ ಭಜನಾಮಂದಿರ ಸೇರಿದಂತೆ ಮುಂತಾದ ಧಾರ್ಮಿಕ ಕೇಂದ್ರಗಳಿವೆ. ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಸಮಯದಲ್ಲಿ ಹೂ ಮಾರುವ ಹೆಂಗಸರು ಬಿದ್ದು ಗಾಯಗೊಂಡಿದ್ದಾರೆ. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್ ಕೂಡ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಸಾರ್ವಜನಿಕರು ದೂರವಾಣಿ ಮೂಲಕ ಹಾಗೂ ಖುದ್ದು ಭೇಟಿ ಮಾಡಿ ಸಂಕಷ್ಟ ಹೇಳಿಕೊಂಡರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಂಘ ಆರೋಪಿಸಿದೆ. ಆದರಿಂದ ನಗರಸಭೆ ಆಯುಕ್ತರು, ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ, ರಸ್ತೆ, ಚರಂಡಿ, ಫುಟ್ಪಾತ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಕ್ಷಣವೇ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಇಲ್ಲವಾದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಣ್ಣಿನ ಪೊರೆ ಕುರಿತ ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ: ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಸ್ಟ್ಯೂಡೆಂಟ್ ಕಮ್ಯೂನಿಟಿ ಔಟ್ ರೀಚ್ ಕ್ಲಬ್ ಆಶ್ರಯದಲ್ಲಿ ನಗರದ ಪಿಇಎಸ್ ಕಾಲೇಜು ಆವರಣದಲ್ಲಿ ಕಣ್ಣಿನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರಿಗೆ ಕಣ್ಣು ಹಾಗೂ ಕಣ್ಣಿನ ಪೊರೆ ಬಗ್ಗೆ ನುರಿತ ವೈದ್ಯರಿಂದ ಸಮಗ್ರ ಮಾಹಿತಿ ನೀಡಲಾಯಿತು. ಆಸ್ಪತ್ರೆಯ ವೈದ್ಯ ಡಾ. ಗಣಪತಿ ತಟಿಪರ್ತಿ, ಡಾ. ರೂಪಶ್ರೀ ಮಾತನಾಡಿದರು. ಪ್ರಾಂಶುಪಾಲ ಡಾ. ಸುರೇಶ್ ಚಂದ್ರ ಮೋಹನ್, ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಎಸ್.ವೈ. ಅರುಣಾದೇವಿ, ಗಣಕ ಯಂತ್ರದ ಮುಖ್ಯಸ್ಥ ಎಸ್. ವಿನಯ್ ಮತ್ತಿತರರು ಇದ್ದರು.