ಕ್ರೈಸ್ತರಿಂದ ಸಮಾಧಿ ಹಬ್ಬ ಆಚರಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 4
ಕ್ರೈಸ್ತ ಸಮುದಾಯದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಸಮಾಧಿ ಹಬ್ಬವನ್ನು ನಗರದ ಕಥೋಲಿಕ ಕ್ರೈಸ್ತರು ಶನಿವಾರ ಕ್ರೈಸ್ತ ಸಮಾಧಿ ಸ್ಥಳದಲ್ಲಿ ಆಚರಿಸಿದರು.
ಈ ದಿವ್ಯಬಲಿ ಪೂಜೆಯಲ್ಲಿ ಬಾಲಯೇಸು ದೇವಾಲಯದ ಗುರು ವಂದನೀಯಾ ಫಾ. ಮಾರ್ಕ್ ಡಿಸಿಲ್ವಾ ಹಾಗೂ ಶಿವಮೊಗ್ಗ ಧರ್ಮ ಕ್ಷೇತ್ರದ ಯುವ ನಿರ್ದೇಶಕ ವಂದನೀಯಾ ಫಾ. ರೊನ್ಲಾಡ್‌ವಗಸ್ ಪಾಲ್ಗೊಂಡಿದ್ದರು.
ಕಥೋಲಿಕ ಕ್ರೈಸ್ತರ ಸಂಪ್ರದಾಯದಂತೆ ಅಂದು ಮೃತರ ಆತ್ಮಗಳಿಗಾಗಿ ಕುಟುಂಬದ ಸದಸ್ಯರು ಪ್ರಾರ್ಥಿಸುವುದು ವಾಡಿಕೆ.
ಶತಮಾನಗಳಿಂದ ನಡೆದು ಬಂದ ಈ ವಾಡಿಕೆಯಂತೆ ಪ್ರತಿವರ್ಷ ಈ ದಿನದಂದು ಕುಟುಂಬದವರೆಲ್ಲರೂ ಮೃತಪಟ್ಟ ಸಮಾಧಿಯ ಎದುರು ಮೆಣದಬತ್ತಿ ಬೆಳಗಿಸಿ ಪುರ್ಷ್ಪಾಣೆ ಮಾಡಿ, ಮೃತರಿಗೆ ಆತ್ಮ ಶಾಂತಿ ಕೋರಿದರು.