ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದೀಪಾವಳಿ ಪ್ರಯುಕ್ತ ಹಳೆ ನಾಣ್ಯ ಪ್ರದರ್ಶನ

Lingaraj Badiger
Updated On : 5 Nov 2013, 10:57 am

ಕ.ಪ್ರ.ವಾರ್ತೆ, ಶಿವಮೊಗ್ಗ,  ನ.4
ಗಾಂಧಿಬಜಾರ್‌ನ ವೀರಭದ್ರಪ್ಪ ಆ್ಯಂಡ್ ಸನ್ಸ್ ದೀಪಾವಳಿ ಪ್ರಯುಕ್ತ ಹಳೆಯ ನಾಣ್ಯಗಳ ಪ್ರದರ್ಶನ ಏರ್ಪಡಿಸಿತ್ತು.
ಕಳೆದ 40 ವರ್ಷಗಳಿಂದ ಲಕ್ಷ್ಮೀ ಪೂಜೆ ಪ್ರಯುಕ್ತ ತಮ್ಮ ಅಂಗಡಿಯಲ್ಲಿ ಆ ರೀತಿಯ ನಾಣ್ಯ ಪ್ರದರ್ಶನ ಏರ್ಪಡಿಸಿಕೊಂಡು ಬರುತ್ತಿರುವ ಪಂಚಾಕ್ಷರಪ್ಪ ಅವರು, ಬ್ರಿಟಿಷ್ ಸರ್ಕಾರ, ರಾಜ, ಮಹಾರಾಜರು, ಮಯೂರ, ದೇವಗಿರಿ ಯಾದವರು ಸೇರಿದಂತೆ ಎಲ್ಲಾ ರಾಜ ವಂಶದ ನಾಣ್ಯಗಳು, ನೋಟುಗಳು ಪ್ರದರ್ಶನದಲ್ಲಿವೆ. ಅಲ್ಲದೆ, ಒಂದು ಕೆಜಿ ತೂಕದ ಎಲಿಜಬೆತ್ ರಾಣಿ ಮುಖ ಬೆಲೆಯ ನಾಣ್ಯ ಹಾಗೂ ಎಲ್ಲಾ ದೇಶದ ವಿವಿಧ ನೋಟುಗಳು, ಕರೆಸ್ಸಿಗಳು ಪ್ರದರ್ಶನದಲ್ಲಿ ಕಂಡುಬಂದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಚಾಕ್ಷರಪ್ಪ, ಕಳೆದ 40 ವರ್ಷಗಳಿಂದ ಈ ರೀತಿಯ ಕಾರ್ಯದಲ್ಲಿ ತೊಡಗಿದ್ದೇನೆ. ಬೇರೆಡೆ ಪ್ರವಾಸಕ್ಕೆಂದು ಹೋದಾಗ ಅಲ್ಲಿ ಸಿಗುವ ನಾಣ್ಯಗಳು, ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ರೂಢಿಸಿಕೊಂಡು ಬಂದಿದ್ದೇನೆ. ಅದನ್ನು ಪ್ರತಿ ವರ್ಷ ದೀಪಾವಳಿಯ ಲಕ್ಷ್ಮೀ ಪೂಜೆಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement