ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಟಾಕಿ: 'ಅರಿವು' ಮೂಡಿಸಿದ ಸಂಸ್ಥೆ

Lingaraj Badiger
Updated On : 5 Nov 2013, 10:49 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 4
ಒಂದೆಡೆ ಎಲ್ಲರೂ ದೀಪಾವಳಿಯ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದರೆ ಇನ್ನೊಂದೆಡೆ ರೋಟರಿಯ ಅಂಗ ಸಂಸ್ಥೆ ಅರಿವು ಸೇವಾ ಸಂಸ್ಥೆ ಪಟಾಕಿ ಸಿಡಿಸುವುದರಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ರಸ್ತೆಗಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿತ್ತು.
ಸೋಮವಾರ ಬಲಿಪಾಡ್ಯಮಿಯ ಪ್ರಯುಕ್ತ ನಗರದಲ್ಲಿ ಪಟಾಕಿ ಸಿಡ್ಡಿಮದ್ದುಗಳು ಹೆಚ್ಚಾಗಿಯೇ ಇದ್ದವು. ಸಂಸ್ಥೆಯು ಮಕ್ಕಳು ಪಟಾಕಿ ಸಿಡಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳನ್ನು ಧ್ವನಿವರ್ಧಕಗಳ ಮೂಲಕ ತಿಳಿಸುತ್ತಿತ್ತು.
ದೀಪಾವಳಿ ಹರುಷ ತರಲಿ, ನೋವುಗಳನಲ್ಲ.. ದೀಪಾವಳಿ ಎಂದರೆ ಬೆಳಕಿನ ಹಬ್ಬ ಪಟಾಕಿಯ ಅಬ್ಬರ ಅಲ್ಲ ಎಂಬ ನಾಮಫಲಕಗಳನ್ನು ವಾಹನವೊಂದಕ್ಕೆ ಹಾಕಿಕೊಂಡು ಸಾರ್ವಜನಿಕರು, ಮಕ್ಕಳು ಮತ್ತು ಯುವಕರಲ್ಲಿ ರಸ್ತೆ, ರಸ್ತೆಗಳಲ್ಲಿ ಅರಿವು ಮೂಡಿಸಿತು.
--
ಪಟಾಕಿ ಸಿಡಿದು ಯುವಕನ ಬೆರಳಿಗೆ ಗಾಯ
ಶಿವಮೊಗ್ಗ: ಪಟಾಕಿ ಹಚ್ಚುವ ಯತ್ನದಲ್ಲಿ ಯುವಕನೊಬ್ಬ ಕೈ ಸುಟ್ಟುಕೊಂಡ ಘಟನೆ ಕುಂಸಿಯಲ್ಲಿ ಸೋಮವಾರ ನಡೆದಿದೆ.
ಕುಂಸಿಯ ಗ್ರಾಮದ ವಾಸಿ ನಾಗರಾಜ್(17) ಕೈ ಸುಟ್ಟುಕೊಂಡವರು. ಇವರು ತಮ್ಮ ಮನೆಯ ಮುಂಭಾಗದಲ್ಲಿ ಪಟಾಕಿ ಹಚ್ಚುವಾಗ ತಮ್ಮ ಕೈ ಬೆರಳುಗಳಿಗೆ ಪಟಾಕಿಯ ಕಿಡಿ ತುಗುಲಿ ಮೂರು ಬೆರಳುಗಳು ತೀವ್ರ ಗಾಯಗೊಂಡಿವೆ. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement