ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೆಟ್ಟದಲ್ಲಿ ಗಂಡು ಹೆಣ್ಣಿಗೆ ವೇಷ ಬದಲಿಸಿ ಮದುವೆ!

Lingaraj Badiger
Updated On : 5 Nov 2013, 10:58 am

ಕೊಳ್ಳೇಗಾಲ: ಮಲೈ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ನೂರಾರು ಭಕ್ತಾದಿಗಳು ಗಂಡಿಗೆ ಹೆಣ್ಣಿನ ವೇಷ ತೊಡಿಸಿ, ಹೆಣ್ಣಿಗೆ ಗಂಡಿನ ವೇಷ ಹಾಕಿ ಮದುವೆ ಮಾಡಿ ಹರಕೆ ಸಲ್ಲಿಸಿದರು.
ಸೋಮವಾರ ದೀಪಾವಳಿ ಜಾತ್ರೆಯ ಅಂಗವಾಗಿ ಭದ್ರಾವತಿಯ ಹರಕೆ ಹೊತ್ತ ಒಂದೇ ಕುಟುಂಬದ ನೂರಾರು ಮಂದಿ ವತ್ಸಲ ಹಾಗೂ ಸುಚಿತ್ ಎಂಬ ಮಕ್ಕಳಿಬ್ಬರಿಗೆ ಗಂಡು ಹೆಣ್ಣಿನ ವೇಷ ಧರಿಸಿ ಮದುವೆ ಮಾಡಿಸಿದರು. ತಮ್ಮ ಸಂಬಂಧಿ ಗಂಡು ಮಗುವಿಗೆ ಹೆಣ್ಣಿನ ವೇಷ, ಹೆಣ್ಣು ಮಗುವಿಗೆ ಗಂಡಿನ ವೇಷ ತೊಡಿಸಿ ಮದುವೆ ಗಂಡು- ಹೆಣ್ಣಿನಂತೆ ಶೃಂಗರಿಸಿದ್ದರು. ಮಡಿಯುಟ್ಟು ಹಲವು ವಿಧಿವಿಧಾನದೊಂದಿಗೆ ಬೋರ್ವೆಲ್ ಬಳಿ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಗಂಡು ಹಾಗೂ ಹೆಣ್ಣಿನ ಕಡೆಯವರು ಹಾಡು-ಕುಣಿತದೊಂದಿಗೆ ಮಾದಪ್ಪನಿಗೆ ಉಘೇ ಘೋಷಣೆ ಕೂಗಿ ದೇವರು ತಂದರು. ಸಂಪ್ರದಾಯ ಬದ್ಧವಾಗಿ ಎಲ್ಲ ವಿಧಿವಿಧಾನಗಳಂತೆ ಮದುವೆ ಮಾಡಿದರು. ದೇವರು ತರುವಾಗ ಪೂಜೆ ಸಲ್ಲಿಸಿದ ನೀರಿನಲ್ಲಿ ಅಡುಗೆ ತಯಾರಿಸಿ ಇತರೆ ಭಕ್ತಾಧಿಗಳಿಗೂ ಸಲ್ಲಿಸುವ ಮೂಲಕ ತಮ್ಮ ಹರಕೆ ಸಲ್ಲಿಸಿದರು.
ಇದು ಮಹದೇಶ್ವರ ಬೆಟ್ಟದಲ್ಲಿ ಹಿಂದಿನಿಂದಲೂ ನಡೆದು ಬಂದ ವಿಶಿಷ್ಟ ಆಚರಣೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement