ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ
ಶಿವಮೊಗ್ಗ: ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಎನ್ ಜಿಓಗಳ ಆಶ್ರಯದಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ 6 ರಿಂದ 16 ವಯಸ್ಸಿನ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಯನ್ನು 2 ಹಂತದಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಶಾಲಾ ಸಮೀಕ್ಷೆಯನ್ನು ನ.6 ಮತ್ತು 7 ರಂದು, ಎರಡನೇ ಹಂತದಲ್ಲಿ ಕುಟುಂಬ ಸಮೀಕ್ಷೆಯನ್ನು ನ.13ರಿಂದ 17ರವರೆಗೆ ಹಮ್ಮಿಕೊಂಡಿದೆ. ಗಣತಿಗೆ ಎಲ್ಲರ ಸಹಕಾರ ಅಗತ್ಯ. ಗಣತಿದಾರರು ಗಣತಿ ಮಾಡಲು ಮನೆಮನೆಗೆ ಭೇಟಿ ನೀಡಿದಾಗ ಕುಟುಂಬದ ಮುಖ್ಯಸ್ಥರು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.