ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೊರಬ: ಗಮನ ಸೆಳೆದ ಗೋಪೂಜೆ

Lingaraj Badiger
Updated On : 5 Nov 2013, 10:49 am

ಸೊರಬ: ನಾಡಿನ ದೊಡ್ಡಹಬ್ಬ ದೀಪಾವಳಿ ಆಚರಣೆ ತಾಲೂಕಿನ ಎಲ್ಲೆಡೆ ನಡೆಯಿತು. ಹಬ್ಬದ ಉತ್ಸಾಹ ಕುಗ್ಗದಿದ್ದರೂ ಹಬ್ಬದ ಪ್ರಮುಖ ಕಳೆಯಾಗಿರುವ ಗೋವುಗಳ ಸಂಖ್ಯೆ ಕ್ಷೀಣಿಸಿದ್ದು, ಏನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ವಾತಾವರಣ ಗ್ರಾಮಾಂತರ ಪ್ರದೇಶದಲ್ಲಿ ಕಂಡುಬಂತು.
ಇರುವ ಗೋವುಗಳಿಗೆ ಇದ್ದುದರಲ್ಲಿಯೆ ಗಮನ ಸೆಳೆಯುವ ಅಲಂಕಾರ ನಡೆಸಿದ ಕೃಷಿಕ ವರ್ಗ ತಮ್ಮ ರೈತಾಪಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಕೃಷಿ ಪರಿಕರಗಳನ್ನು ಬಲೀಂದ್ರನೊದಿಗೆ ಪೂಜಿಸಿದರು. ಗೋವು ಮನೆಯಲ್ಲಿ ಸಾಕಿದವರು, ಸಾಕದೆ ಇರುವವರು ಇನ್ನೊಬ್ಬರ ಮನೆಗೆ ತೆರಳಿ ಅಥವಾ ತಮ್ಮ ಮನೆಗೆ ತಂದುಕೊಂಡು ಕಾಲು ಪೂಜೆ ನಡೆಸಿದರು. ಗೋಪೂಜೆಯ ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.
ಸಂಜೆ ವೇಳೆ ಮನೆಗೆ ಮರಳುವ ಜಾನುವಾರುಗಳಿಗೆ ಬಲಿ ಹುರುಸು ಬೀರುವ, ಜಾನುವಾರುಗಳಿಗೆ ಆರತಿ ಎತ್ತುವ, ಹೋಳಿಗೆ ತಿನ್ನಿಸುವ ಪದ್ಧತಿ ನಡೆಸಿದರು. ತಾಲೂಕಿನ ಕೆಲವೆಡೆ ಹೋರಿ ಬೆರೆಸುವ ಚಟುವಟಿಕೆಯೂ ನಡೆದಿದ್ದು, ಹೋರಿಗೆ ಕಟ್ಟಿದ ಕೊಬ್ಬರಿ ಗಿಟುಕು, ಹಣ್ಣಡಿಕೆ, ಚೆಂಡು ಹೂ ಸರ ಕೀಳುವ ಉತ್ಸಾಹ ಕೂಡ ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement