ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿತ್ಯುಳ್ಳ ಜ್ಯೋತಿ ನೀಡುವ ಮಲೆನಾಡ ಅಂಟಿಗೆ ಪಂಟಿಗೆ

Vishwanath S
Updated On : 7 Nov 2013, 11:44 am

ಸೊರಬ: ಮನೆಮನೆಗೆ ದೀಪ ಕೊಡುವ, ಬಲೀಂದ್ರ ರಾಜನನ್ನು ನೆನೆಸುವ ಮಲೆನಾಡಿನ ಪಾರಂಪರಿಕ ಅಂಟಿಗೆ ಪಂಟಿಗೆ ಆಚರಣೆ ತಾಲೂಕಿನ ಕೆಲವೆಡೆ ನಡೆಯಿತು.
ದೀಪಾವಳಿಯ ದಿನಗಳಲ್ಲಿ ಮನೆಮನೆಗೆ ದೀಪ ಮುಟ್ಟಿಸುವ, ತಾವು ಬಾಳಿ ಇತರರರಿಗೂ ಬಾಳುವಂತೆ ಹರಸುವ ವಿಶಿಷ್ಟ ಪರಂಪರೆಯ ಅಂಟಿಗೆ ಪಂಟಿಗೆ ಆಚರಣೆ ತುಸು ಸವೆದಿದೆಯಾದರೂ ದೀವರ ಜನಾಂಗವಿರುವ ಅನೇಕ ಕಡೆ ಬಳಕೆಯಲ್ಲಿದೆ.
ಪೂಜಿಸಿ ಹೊರಡುವ ತಂಡ: ಗ್ರಾಮ ದೇವತೆಯ ದೇಗುಲದಲ್ಲಿ ದೀಪ ಹಚ್ಚಿ, ಪೂಜಿಸಿ ಹೊರಡುವ ತಂಡಗಳಲ್ಲಿ ಮುಮ್ಮೇಳದಲ್ಲಿ ಇಬ್ಬರು, ಹಿಮ್ಮೇಳದಲ್ಲಿ ಅನೇಕರು ಧ್ವನಿಗೂಡಿಸಿ ಬಲ್ಲಾಳ ಬಲವೀಂದ್ರರಾಯ ಬಂದಾನು ನಮ್ಮ ರಾಜ್ಯಕ್ಕೆ....ಎನ್ನುತ್ತಾ ಬಲೀಂದ್ರ ರಾಜನ ಸಾಂಗತ್ಯ ನೆನಪಿಸಿ, ದೀಪ್ ದೀಪೋಳ್ಗೆ ಎಂದು ಮನೆ, ಮನ ಬೆಳಗಿಸುತ್ತಾರೆ.
ಅಂಟಿಗೆ ಪಂಟಿಗೆ ಹಾಡುವ ತಂಡ ಪ್ರವೇಶಿಸುವುದಕ್ಕೂ ಮೊದಲು ಮನೆಮನೆಗೆ ದೀಪ ನೀಡಿ ಕತ್ತಲೆ ಹೋಗಲಾಡಿಸುವ ಉದಾತ್ತ ಪರಿಭಾವನೆ ಪ್ರಮುಖವಾಗಿರುತ್ತದೆ. ಬೆಳಕು ನೀಡಿ ಬದುಕು ತೋರುವ ಈ ಮಹತ್ತರ ಪ್ರಕ್ರಿಯೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ.  ದೀವಟಿಗೆ ಹಿಡಿದು ದೀವರು ಎನಿಸಿಕೊಂಡ ದೀವರ ಜನಾಂಗ ತಮ್ಮ ಮೂಲ ಪರಂಪರೆಯನ್ನು ಈ ರೀತಿ ಅಂಟಿಗೆ ಪಂಟಿಗೆಯ ಮೂಲಕ ಜೀವಂತವಿರಿಸಿಕೊಂಡಿರುವುದು ಸಂತಸದಾಯಕ ವಿಚಾರವಾಗಿದೆ.
ಅಹೋರಾತ್ರಿ: ಈ ಸಂದರ್ಭದಲ್ಲಿ ಮನೆಯವರು ನೀಡುವ ಕಾಯಿ, ಸಿಹಿ, ಕಾಣಿಕೆ ಸಂಗ್ರಹಿಸಿ ಧಾರ್ಮಿಕ ಕಾರ್ಯಗಳಿಗೆ ಬಳಸುವ ತಂಡಗಳು ರಾತ್ರಿ 9 ರಿಂದ ಬೆಳಗಿನ ಜಾವದವರೆಗೂ ಅಂಟಿಗೆ ಪಂಟಿಗೆ ಪದ ಹಾಡುತ್ತ ಸಾಗುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement