ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ಕರಡಿನಲ್ಲಿ ಹಲವು ತಪ್ಪು: ಆರೋಪ

Vishwanath S
Updated On : 7 Nov 2013, 11:44 am

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ನ. 6
ರಾಜ್ಯ ಸರ್ಕಾರ ಸಿದ್ಧಗೊಳಿಸಿರುವ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ ಕರಡು ಪ್ರತಿಯಲ್ಲಿ ಸಾಕಷ್ಟು ತಪ್ಪುಗಳಿವೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಪವಾಡ ಭಂಜಕ ಹುಲಿಕಲ್ ನಟರಾಜ್ ವಿಷಾದಿಸಿದರು.
ರೋಟರಿ ಮತ್ತು ಭಾರತೀಯ ವೈದ್ಯಕೀಯ ಸಂಘ ಆಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನು ಶಾಲೆ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ಸಿದ್ಧಗೊಳಿಸಿರುವ ಪ್ರತಿಯಲ್ಲಿ ಆಚರಣೆಗಳ ಕುರಿತು ಪ್ರಶ್ನೆ ಮಾಡಿದೆ. ಇದನ್ನು ಎಂದೂ ಬಲಿಹಾಕಲು ಸಾಧ್ಯವಿಲ್ಲ. ಬದಲಿಗೆ ಅದರೊಳಗಿನ ಕಂದಾಚಾರದ ಬಗ್ಗೆ ಹೋರಾಟ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಾಗೃತಿ ಮೂಡಿಸಿ: ಜಾದು, ಯಕ್ಷಿಣಿ ಕಲೆ ಬಗ್ಗೆಯೂ ಕರಡು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ, ಈ ಎರಡು ಮನರಂಜನಾ ಕಾರ್ಯಕ್ರಮಗಳು. ಇವುಗಳ ಉಲ್ಲೇಖ ಸರಿಯಲ್ಲ ಎಂದ ಅವರು, ಇಂದು ಕಾನೂನಿನ ಅಗತ್ಯವಿದೆ. ಅದು ಪುಸ್ತಕಗಳಲ್ಲಿ ಮಾತ್ರ. ಕಾನೂನು ಜಾರಿ ಮಾಡುವುದರಿಂದ ಎಲ್ಲವನ್ನು ಹತೋಟಿಗೆ ತರಲು ಸಾಧ್ಯವಿಲ್ಲ. ಕಾನೂನಿನ ಬಗ್ಗೆ ಜನರಲ್ಲಿ ಜಾಗೃತಿ, ಪ್ರತಿ ಗ್ರಾಮ, ಶಾಲೆಗಳ ಮಟ್ಟದಲ್ಲಿ ಮಕ್ಕಳು, ಜನರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ನವೆಂಬರ್‌ನಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಇಂದು ಕನ್ನಡ ಶಾಲೆಯಲ್ಲಿರುವ ಶಿಕ್ಷಕರ ಮಕ್ಕಳು ಆಂಗ್ಲ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾನಸಿಕ ವೈದ್ಯ ಅಶೋಕ್ ಪೈ ಮತ್ತು ಕಂಟಿಕರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಹುಲಿಕಲ್ ನಟರಾಜ್ ಹಲವಾರು ಪವಾಡಗಳನ್ನು ಪ್ರದರ್ಶಿಸಿದರು.
ಐಎಂಎ ಅಧ್ಯಕ್ಷೆ ವಾಣಿ ಕೋರಿ, ರೋಟರಿ ಸಂಸ್ಥೆ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement