ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೋದಿ ರ್ಯಾಲಿಗೆ ಜಿಲ್ಲೆಯಿಂದ 15 ಸಾವಿರ ಜನ

Vishwanath S
Updated On : 8 Nov 2013, 12:32 pm

ಕ.ಪ್ರ. ವಾರ್ತೆ, ಶಿವಮೊಗ್ಗ, ನ.7
ಬೆಂಗಳೂರಿನಲ್ಲಿ ನ.17ರಂದು ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ನಗರದಿಂದ 21 ಬೋಗಿಗಳ ಎರಡು ರೈಲುಗಳು ಹೊರಡಲಿವೆ. ಜಿಲ್ಲೆಯಿಂದ 15 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯನ್ನು ಜಿಲ್ಲಾ ಬಿಜೆಪಿ ಹೊಂದಿದೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ರಾಜ್ಯಸಭಾ ಸದಸ್ಯ, ಪಕ್ಷದ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್, ಜಿಲ್ಲೆಯಾದ್ಯಂತ ಎಲ್ಲಾ ಮಂಡಲಗಳಲ್ಲಿಯೂ ಈಗಾಗಲೇ ವಿಶೇಷ ಸಭೆಗಳನ್ನು ನಡೆಸಲಾಗಿದೆ. ಎಲ್ಲಾ ಶಕ್ತಿಕೇಂದ್ರಗಳಲ್ಲಿ ಸಿದ್ಧತಾ ಸಭೆ ನಡೆದಿವೆ. ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳೂ ನಿರಂತರ ನಡೆಯುತ್ತಿವೆ ಎಂದರು. ಎರಡು ರೈಲಿಗೆ ಅನುಮತಿ ಪಡೆದಿದ್ದೇವೆ. ಈ ರೈಲು ಶಿವಮೊಗ್ಗದಿಂದ ನ.16ರ ರಾತ್ರಿ 12 ಗಂಟೆಗೆ ಹೊರಡಲಿದ್ದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪಲಿದೆ. 17ರ ಸಂಜೆ ಬೆಂಗಳೂರಿನಿಂದ 5 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಶಿವಮೊಗ್ಗ ತಲುಪಲಿದೆ. ಈ ರೈಲಿಗೆ ಬರುವ ಪ್ರತಿಯೊಬ್ಬ ಕಾರ್ಯಕರ್ತರು 100 ಪಾವತಿಸುವರು ಎಂದರು.
ಇದಲ್ಲದೇ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತರಾಗಿ ಕೂಡಾ ಸಾಕಷ್ಟು ಜನ ಈ ರ್ಯಾಲಿಗೆ ಆಗಮಿಸಲು ಇಚ್ಚಿಸಿದ್ದು, ಅದಕ್ಕಾಗಿ ಬಿಜೆಪಿ ಕಾರ್ಯಾಲಯಗಳಲ್ಲಿ ಬುಧವಾರದಿಂದ ಕಾರ್ಯಕ್ರಮಕ್ಕಾಗಿ 10 ನೋಂದಣಿ ಶುಲ್ಕವನ್ನು ಪಡೆದು ನೋಂದಣಿ ಪತ್ರವನ್ನು (ಕೂಪನ್) ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಸಭೆ: ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸಲು ನ.7ರಿಂದ ಮೂರು ದಿನ ಜಿಲ್ಲೆಯ ಎಲ್ಲಾ ಶಕ್ತಿಕೇಂದ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು.
ನ.16ರಂದು ಶಿವಮೊಗ್ಗದಲ್ಲಿ ಬಿಜೆಪಿ ಯುವಮೋರ್ಚಾ ರ್ಯಾಲಿ ಆಯೋಜನೆ ಮಾಡಿದೆ. ನ.11ರಂದು ಈ ಸಂಬಂಧ ಯುವಕರ ಪಾದಯಾತ್ರೆ ನಡೆಯುವುದು ಎಂದರು.
ಶಾದಿ ಭಾಗ್ಯ: ಶಾದಿ ಭಾಗ್ಯ ಯೋಜನೆಯನ್ನು ಜೈನ, ಪಾರ್ಸಿ ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೂ ವಿಸ್ತರಿಸುವುದಾದರೆ ಅದನ್ನು ಶಾದಿಭಾಗ್ಯ ಎಂದೇಕೆ ಕರೆಯುತ್ತೀರಿ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪಿಸಿದರು.
ಈ ಯೋಜನೆ ಜಾರಿ ಮಾಡುತ್ತೇವೆಂದು ಮುಂಗಡಪತ್ರದಲ್ಲಿ ಹೇಳಿಲ್ಲ. ಯೋಜನೆಗೆ ಯಾವ ಹೆಸರನ್ನಾದರೂ ಇಡಿ ಪರವಾಗಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಮದುವೆಯಾದರೆ ಶಾದಿಭಾಗ್ಯ ಕೊಡುವುದಿಲ್ಲ ಎಂಬ ನಿಯಮವಾದರೂ ಇರುತ್ತದೆ ಎಂಬ ನಿರೀಕ್ಷೆ ನಮಗಿತ್ತು ಎಂದು ಕುಟುಕಿದರು.
ಈ ಯೋಜನೆಯನ್ನು ಎಲ್ಲಾ ಜಾತಿಯ ಬಡವರಿಗೆ ವಿಸ್ತರಿಸಿ. ಇಲ್ಲದಿದ್ದರೆ ಓಟಿಗಾಗಿಯೇ ಈ ಯೋಜನೆ ಮಾಡಿರುವುದು ಸಾಬೀತಾಗುತ್ತದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪಕ್ಷದ ಪ್ರಮುಖರಾದ ಗಿರೀಶ್ ಪಟೇಲ್, ದತ್ತಾತ್ರಿ, ಮಧುಸೂದನ್, ಅಣ್ಣಪ್ಪ ಮತ್ತಿತರರು ಗೋಷ್ಠಿಯಲ್ಲಿದ್ದರು.
2 ರೈಲಿಗೆ ಅನುಮತಿ ಪಡೆದಿದ್ದು  ಈ ರೈಲು ಶಿವಮೊಗ್ಗದಿಂದ ನ.16ರ ರಾತ್ರಿ 12 ಗಂಟೆಗೆ ಹೊರಡಲಿದ್ದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪಲಿದೆ. 17ರ ಸಂಜೆ ಬೆಂಗಳೂರಿನಿಂದ 5 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ಶಿವಮೊಗ್ಗ ತಲುಪಲಿದೆ
ಜಿಲ್ಲೆಯಾದ್ಯಂತ ಸ್ವಯಂಪ್ರೇರಿತರಾಗಿ ಕೂಡಾ ಸಾಕಷ್ಟು ಜನ ಈ ರ್ಯಾಲಿಗೆ ಆಗಮಿಸಲು ಇಚ್ಚಿಸಿದ್ದು, ಅದಕ್ಕಾಗಿ ಬಿಜೆಪಿ ಕಾರ್ಯಾಲಯಗಳಲ್ಲಿ ಬುಧವಾರದಿಂದ ಕಾರ್ಯಕ್ರಮಕ್ಕಾಗಿ 10 ನೋಂದಣಿ ಶುಲ್ಕವನ್ನು ಪಡೆದು ನೋಂದಣಿ ಪತ್ರವನ್ನು (ಕೂಪನ್) ನೀಡಲಾಗುವುದು
10 ಕೊಟ್ಟು ಬರಲಿ...
10 ಶುಲ್ಕ ನೀಡಿ ಕೂಪನ್ ಪಡೆದ ಯಾರು ಬೇಕಾದರೂ ಬೆಂಗಳೂರು ಕಾರ್ಯಕ್ರಮಕ್ಕೆ ಬರಬಹುದು...
ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಆಹ್ವಾನಿಸುತ್ತೀರಾ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ.
ಇಲ್ಲಿ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಎಂಬ ಬೇಧವಿಲ್ಲ. ಸಂಸದರೂ ಸಹ 10 ಶುಲ್ಕ ನೀಡಿ ಕಾರ್ಯಕ್ರಮಕ್ಕೆ ಬರಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement