ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉದ್ಯೋಗ ತರಬೇತಿ ಗ್ರಾಮಕ್ಕೂ ವಿಸ್ತರಣೆ ಅಗತ್ಯ

Vishwanath S
Updated On : 9 Nov 2013, 12:21 pm

ಕ.ಪ್ರ.ವಾರ್ತೆ, ಭದ್ರಾವತಿ, ನ.8 ಸ್ವಯಂ ಉದ್ಯೋಗ ತರಬೇತಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಕಾರ್ಯವಾಗಬೇಕಿದೆ ಎಂದು ನಗರಸಭಾ ಸದಸ್ಯ ಆರ್. ಕರುಣಾಮೂರ್ತಿ ಹೇಳಿದರು.
ಅವರು ಹಳೇನಗರದ ಡಾ. ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಗರಸಭೆ  ಸಹಕಾರದಿಂದ ಆಯೋಜಿಸಿದ್ದ ಸ್ವರ್ಣಜಯಂತಿ ರೋಜ್‌ಗಾರ್ ಯೋಜನೆಯಡಿಯಲ್ಲಿ ಸ್ಟೆಪ್‌ಅಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ತೊಂದರೆ: ವೈದ್ಯ ವೃತ್ತಿ ಮೂಲಕ ರೋಗಿಗಳ ಸೇವೆ ಮಾಡಬೇಕೆಂದು ಹಲವರಿಗೆ ಆಸೆಯಿದ್ದರೂ, ಆರ್ಥಿಕ ತೊಂದರೆ ಕಾರಣ ಅವರ ಆಸೆ ಈಡೆರುವುದಿಲ್ಲ. ಆದರೆ ಅಂತಹ ಯುವಕ, ಯುವತಿಯರು ಪ್ಯಾರಾ  ಮೆಡಿಕಲ್ ಕಾಲೇಜಿನಲ್ಲಿ ನರ್ಸ್, ಮಿಡ್ ವೈಫ್ ತರಬೇತಿ ಪಡೆಯುವ ಮೂಲಕ ರೋಗಿಗಳ ಸೇವೆ ಮಾಡಲು ಅವಕಾಶ ಪಡೆಯಬಹುದಾಗಿರುತ್ತದೆ ಎಂದರು.
ರಾಜ್ಯ, ಕೇಂದ್ರ ಸರ್ಕಾರಗಳು ಬಡ ಯುವಕ, ಯುವತಿಯರ ಆರ್ಥಿಕ ಸ್ವಾವಲಂಬನೆಗಾಗಿ ಹಲವು ಸ್ವಯಂ ಉದೋಗ ತರಬೇತಿ ಯೋಜನೆ ಜಾರಿಗೆ ತಂದಿವೆ. ಈ ಯೋಜನೆ ಸದ್ಬಳಕೆ ಮಾಡಿಕೊಳ್ಳುವಮೂಲಕ ಯುವ ಜನಾಂಗ ಸ್ವಯಂ ಉದ್ಯೋಗದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಸ್ವಯಂ ಉದ್ಯೋಗಿಗಳಾಗಿ: ಜಿಲ್ಲಾಧಿಕಾರಿ ಕಚೇರಿಯ ಕೌಶಲ್ಯ ತರಬೇತಿ ತಜ್ಞ ದೇವೇಂದ್ರ ನಾಯಕ್ ಮಾತನಾಡಿ, ಇಂತಹ ತರಬೇತಿ ಮೂಲಕ ಹೆಚ್ಚಿನ ಜನರು ಸ್ವಯಂ ಉದ್ಯೋಗಿಗಳಾಗಬೇಕೆಂಬ ಸದಾಶಯದಿಂದ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಳೆದ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 4,110 ಜನರಿಗೆ ಈ ಯೋಜನೆಯಡಿ ತರಬೇತಿ ನಿಡಬೇಕೆಂಬ ಗುರಿಯನ್ನು ಸರ್ಕಾರ ನಿಗದಿಪಡಿಸಿತ್ತಾದರೂ, 2,150 ಜನರಿಗೆ ಮಾತ್ರ ತರಬೇತಿ ನೀಡಲು ಸಾಧ್ಯವಾಯಿತು. ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ನುರಿತ ಶಿಕ್ಷಕರು, ಸುಸಜ್ಜಿತ ಮೂಲ ಸೌಕರ್ಯ ಇರುವುದರ ಜೊತೆಗೆ ಯುವಕರೂ ಸಹ ಆಸಕ್ತಿ ವಹಿಸಿ ಹೊಸ ತರಬೇತಿಗಳಿಗೆ ಪ್ರವೇಶ ಪಡೆದಾಗ ಮಾತ್ರ ಸ್ವಯಂ ಉದ್ಯೋಗ ಯೋಜನಾ ತರಬೇತಿ ಯಶಸ್ವಿಯಾಗಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಟಿ. ರಾಜೇಂದ್ರ ವಹಿಸಿದ್ದರು. ನಗರಸಭಾ ಸದಸ್ಯರಾದ ವಿದ್ಯಾಶ್ರೀ, ಶಾಂಭವಿ, ನಗರಸಭೆ ಸಮನ್ವಯ ಸಂಘಟನಾಧಿಕಾರಿಗಳಾದ ಈಶ್ವರಪ್ಪ, ಎಂ. ಸುಹಾಸಿನಿ, ರವಿಕುಮಾರ್, ಸುಮಿತ್ರ ಮಾತನಾಡಿದರು. ಕವಿತ ಪ್ರಾರ್ಥಿಸಿದರು, ಗಣೇಶ್ ಸ್ವಾಗತಿಸಿದರು. ಉಷಾ ನಿರೂಪಿಸಿದರು. ಶ್ರೀನಿವಾಸ್ ಪ್ರಾಸ್ತಾವಿಕ ಡಿಗಳನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement