ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜಕೀಯ ಸಾಮಾಜಿಕ ಕ್ಷೇತ್ರ: ಕಾಗೋಡು

Vishwanath S
Updated On : 9 Nov 2013, 12:20 pm

ಶಿವಮೊಗ್ಗ: ಇಂದಿನ ರಾಜಕಾರಣ ಹಾಗೂ ಶಾಸನ ಸಭೆಗಳನ್ನು ನೋಡಿದರೆ ದುಃಖವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿಷಾದ ವ್ಯಕ್ತಪಡಿಸಿದರು.
ವಕೀಲರ ಸಂಘ ವಕೀಲರ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ದಿ. ಎಚ್. ಗಣಪತಿಯವರ ಭಾವಚಿತ್ರ ಅನಾವರಣ ಮತ್ತು ಪ್ರಶಸ್ತಿ ಪುರಸ್ಕೃತ ವಕೀಲರಿಗೆ ಸನ್ಮಾನ ಸಮಾರಂಭದಲ್ಲಿ ಅವರು, ಈ ಹಿಂದೆ ಶಾಸನಸಭೆಗಳು ಬೆಳಗ್ಗೆಯಿಂದ ಸಂಜೆವರೆಗೆ ಅರ್ಥಪೂರ್ಣವಾಗಿ ನಡೆಯುತ್ತಿದ್ದವು. ಆದರೆ ಇಂದು ಕೆಲವೊಂದು ವಿಷಯ ಕುರಿತು ಚರ್ಚೆ ನಡೆಯುತ್ತಿದ್ದಂತೆ ಸಭೆಗೆ ಬ್ರೇಕ್ ಬೀಳುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಚುನಾವಣೆ ಮಾತ್ರವಲ್ಲ: ರಾಜಕೀಯ ಎಂದರೆ ಚುನಾವಣೆ ಮಾತ್ರವಲ್ಲ. ಅದೊಂದು ಸಾಮಾಜಿಕ ಕ್ಷೇತ್ರ. ಕೋಣಂದೂರು ಲಿಂಗಪ್ಪ ಉತ್ತಮ ರಾಜಕಾರಣಿ. ಅವರೊಂದಿಗಿನ ಒಡನಾಟ ಉತ್ತಮವಾಗಿತ್ತು ಎಂದು ಹಂಚಿಕೊಂಡರು.
ಒಮ್ಮೆ ಚುನಾವಣೆಯಲ್ಲಿ ಲಿಂಗಪ್ಪನವರು ಪರಾಭವಗೊಂಡ ನಂತರ ಮತ್ತೆ ಆ ಕ್ಷೇತ್ರದ ಕಡೆಗೆ ಬಾರದಿದ್ದುದನ್ನು ನೆನಪಿಸಿಕೊಂಡ ಅವರು, ರಾಜಕೀಯ ಕ್ಷೇತ್ರಕ್ಕೆ ಒಗ್ಗಿಕೊಂಡ ಮೇಲೆ ಸೋಲೇ ಇರಲಿ, ಗೆಲವೇ ಆಗಲಿ ಅದೇ ಕ್ಷೇತ್ರದಲ್ಲೇ ಕೆಲಸ ಮಾಡಬೇಕು ಎಂದರು.
ನಾನು ಲೋಕೋಪಯೋಗಿ ಇಲಾಖೆ ಸಚಿವನಾಗಿದ್ದಾಗ ನ್ಯಾಯಾಲಯ ಸಮುಚ್ಚಯಕ್ಕೆಂದೇ 7 ಎಕರೆ ಜಮೀನು ಮೀಸಲಿಡಲಾಗಿತ್ತು. ಅದಕ್ಕೆ ಟೆಂಡರ್ ಪ್ರಕ್ರಿಯೆ ಕೂಡ ಮುಗಿದು ಹೋಗಿತ್ತು. ಆದರೆ, ಅದು ನಗರದ ಹೊರವಲಯದಲ್ಲಿದೆ ಎಂದು ದೇವೇಗೌಡರಿಗೆ ಮನವಿ ಕೊಟ್ಟು ಟೆಂಡರ್ ಪ್ರಕ್ರಿಯೆಯನ್ನೇ ಬದಲಾಯಿಸಲಾಯಿತು.
ನಿಲ್ಲಲು ಕೂರಲು ಜಾಗವಿಲ್ಲ: ಈಗ ನ್ಯಾಯಾಲಯ ಸಮುಚ್ಚಯ ಬೆಂಕಿಪೊಟ್ಟಣ ಇಟ್ಟ ರೀತಿಯಲ್ಲಿದೆ. ಜನರಿಗೆ ನಿಲ್ಲಲು-ಕೂರಲು ಕೂಡ ಜಾಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ವಕೀಲ ವೃತ್ತಿಯ ದಿನ ನೆನಪಿಸಿಕೊಂಡು ಮಾತನಾಡಿದ ಕಾಗೋಡು, 1961ರಲ್ಲಿ ಗೇಣಿ ರೈತರ ಜಮೀನು ಕಾನೂನು ರೂಪುಗೊಂಡು, ನಂತರ 65ರಲ್ಲಿ ಜಾರಿಗೆ ಬಂದಿತ್ತು. ಆದರೂ ರೈತರಿಗೆ ಜಮೀನು ಸಿಕ್ಕರಲಿಲ್ಲ.
ಇದೇ ಸಂದರ್ಭದಲ್ಲಿ ಗೇಣಿ ರೈತರ ಪರವಾಗಿ ರಚನೆಯಾದ ಸದನ ಸಮಿತಿಯಲ್ಲಿ ಸದಸ್ಯನಾಗಿದ್ದೆ. ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಕೋಣಂದೂರು ಲಿಂಗಪ್ಪ ಹಾಗೂ ಡಾ.ಕೆ. ಪದ್ಮನಾಭ ಉಡುಪ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ.ಭಟ್, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement