ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರೋಗ್ಯವಂತ ಮಗು ಪಡೆಯಲು ಕಾಲ ಕಾಲಕ್ಕೆ ಚಿಕಿತ್ಸೆ ಅಗತ್ಯ

Vishwanath S
Updated On : 10 Nov 2013, 1:05 am

ಆಯನೂರು: ಪ್ರತಿ ಗರ್ಭಿಣಿಯರು ಕಾಲಕಾಲಕ್ಕೆ ಸರಿಯಾಗಿ ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ  ಆರೋಗ್ಯವಂತ ಮಗು ಪಡೆಯಬಹುದು ಎಂದು ಆಯನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಾಯತ್ರಿ ಸಲಹೆ ನೀಡಿದರು.ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಆಯನೂರು ಕೋಟೆಯ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಗರ್ಭಿಣಿ ಮಹಿಳೆಯರ ಸೀಮಂತ, ಮಕ್ಕಳ ಹುಟ್ಟುಹಬ್ಬ, ಪೌಷ್ಟಿಕ  ಆಹಾರ ಶಿಬಿರ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರು ಒಳ್ಳೆಯ ಆಹಾರ ಸೇವಿಸಬೇಕು. ಈ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗದೇ ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಮೊದಲ 3 ತಿಂಗಳು ತುಂಬಾ ಜಾಗ್ರತೆ ವಹಿಸುವುದರಿಂದ ಅಂಗವಿಕಲತೆ ಹಾಗೂ ಬುದ್ಧಿಮಾಂದ್ಯ ಮಕ್ಕಳ ಹುಟ್ಟುವಿಕೆಯನ್ನು ತಪ್ಪಿಸಬಹುದು ಎಂದರು. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲೋಕೇಶಪ್ಪ ಮಾತನಾಡಿ, ಪ್ರತಿವರ್ಷ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹುಟ್ಟುಹಬ್ಬ ಆಚರಣೆ ನಡೆಸುತ್ತಿರುವುದು ಸಂತೋಷದ ವಿಚಾರ. ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು. ಎಸಿಡಿಪಿಒ ದಿವಾಕರ್, ಮೇಲ್ವಿಚಾರಕಿ ಸಾವಿತ್ರಿ, ಆರೋಗ್ಯ ಕೇಂದ್ರದ ಸಹಾಯಕಿ ಯಶೋಧ, ಉಷಾ, ಅಂಗನವಾಡಿ ಕಾರ್ಯಕರ್ತೆ ನಿಲೋಫರ್, ನಿರ್ಮಲ, ಜಯಂತಿ ಹಾಗೂ ಆಶಾ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement