ದಲಿತ ಬಾಲಕಿ ಮೇಲೆ ಅತ್ಯಾಚಾರ: ದಸಂಸ ಆರೋಪ
ಶಿವಮೊಗ್ಗ: ಭದ್ರಾವತಿಯ ವಕೀಲ ನಂಜಪ್ಪ ಅವರ ಮಗ ಕಾರ್ತಿಕ್ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪವಿದ್ದು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಶನಿವಾರ ಸಂತ್ರಸ್ತ ಬಾಲಕಿಯ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ಇಲ್ಲಿನ ವಕೀಲ ಎ.ಬಿ. ನಂಜಪ್ಪ ಅವರು ತಮ್ಮ ಮನೆಯಲ್ಲಿ ದಲಿತ ಬಾಲಕಿಯನ್ನು ಚಿಕ್ಕವಯಸ್ಸಿನಿಂದ ಕೆಲಸಕ್ಕೆಂದು ಇರಿಸಿಕೊಂಡಿದ್ದರು. ಇದೀಗ ಆಕೆ 9ನೇ ತರಗತಿ ಓದುತ್ತಿದ್ದು, ಬಾಲಕಿಯ ಮೇಲೆ ನಂಜಪ್ಪ ಅವರ ಮಗ ಕಾರ್ತಿಕ್ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಗಿಂಕ ದೌರ್ಜನ್ಯ ನಡೆಸುತ್ತಿದ್ದನು. ಆದರೆ, ಗರ್ಭಿಣಿಯಾದ ಬಾಲಕಿಯನ್ನು ವಕೀಲ ನಂಜಪ್ಪ ಮತ್ತು ಪತ್ನಿ ಸೇರಿ ಸೆ.3ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ. ಅಲ್ಲದೇ ವಿಷಯ ಬಹಿರಂಗಪಡಿಸದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ಸೂಚನೆ: ದಲಿತ ಸಂಘಟನೆ ಮೂಲಕ ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ರಕ್ಷಣಾಧಿಕಾರಿಗಳು ಕೂಡ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಆದರೆ, ಭದ್ರಾವತಿಯ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್, ಮಹಿಳಾ ಸಬ್ ಇನ್ಸ್ಪೆಕ್ಟರ್ಗಳು ಕ್ರಮ ಕೈಗೊಂಡಿಲ್ಲ. ಸಾಕ್ಷಿ ನಾಶ ಮಾಡಿಸಿದ ಕಾರ್ತಿಕ್ ಅವರ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿದರು.ಸುರೇಶ್ ಮಾತನಾಡಿ, ಸಂತ್ರಸ್ತ ಬಾಲಕಿಗೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಹಾಗೂ ಬಾಲಕಿಯ ಸಂಪೂರ್ಣ ವಿದ್ಯಾಭ್ಯಾಸ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಲೈಗಿಂಕ ದೌರ್ಜನ್ಯಕೊಳಗಾದ ಬಾಲಕಿಯು ತನ್ನ ಮೇಲೆ ಕಾರ್ತಿಕ್ ಲೈಂಗಿಕ ದೌರ್ಜನ್ಯವೆಸಗಿರುವ ಕುರಿತು ಆರೋಪಿಸಿದಳು. ಸಮಿತಿ ಜಿಲ್ಲಾ ಸಂಚಾಲಕ ರಾಜಕುಮಾರ್, ಎಂ. ಪಳನಿರಾಜ್, ತಾಲೂಕು ಅಧ್ಯಕ್ಷ ಎಂ. ಶ್ರೀನಿವಾಸನ್, ಬಾಲಕಿ ಅಣ್ಣ ರಮೇಶ್, ನೊಂದ ಬಾಲಕಿ ಕೆ. ಪಾರ್ವತಿ, ರಾಜೇಂದ್ರ ಮತ್ತಿತರರು ಇದ್ದರು.