ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಔರ್‌ಖೇಲ್ ಕ್ರೀಡಾಕೂಟ

Vishwanath S
Updated On : 10 Nov 2013, 1:06 am

ಸೊರಬ: ಪ್ರಸಕ್ತ 2013-14ನೇ ಸಾಲಿನ ತಾಲೂಕು ಪಂಚಾಯಿತಿ ಯುವ ಕ್ರೀಡಾ ಔರ್‌ಖೇಲ್ ಅಭಿಯಾನ್ ಕ್ರೀಡಾಕೂಟ ಇದೆ 11ಮತ್ತು 12 ರಂದು ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ಅಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಕ್ರೀಡೆಯಲ್ಲಿ ಭಾಗವಹಿಸುವ ಬಾಲಕ, ಬಾಲಕಿಯರು ಗ್ರಾಮೀಣ ಪ್ರದೇಶದವರಾಗಿದ್ದು, ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರಬೇಕು. 16ರ ವಯೋವುತಿ ಮೀರಿರಬಾರದು, ಆಯಾ ಗ್ರಾಮದವರು ತಮ್ಮ ವ್ಯಾಪ್ತಿಯ ಗ್ರಾಪಂನಿಂದ ನಿವಾಸಿ ದೃಢೀಕರಣ, ಶಾಲೆಯಿಂದ ವಯಸ್ಸಿನ ಪ್ರಮಾಣ ಪತ್ರವನ್ನು ನಿಗದಿತ ನಮೂನೆಯಲ್ಲಿ ತರಬೇಕು. ಮಾಹಿತಿಗೆ ಬಣಕಾರ್‌ಮೊ- 9008704744, 9448628573 ಸಂಪರ್ಕಿಸಿ.
ಸೌಲಭ್ಯಕ್ಕಾಗಿ ಹೋರಾಡುವ ಅಗತ್ಯವಿಲ್ಲ: ಉಮೇಶ್
ಸೊರಬ: ಹೋರಾಟದ ಮೂಲಕ ನಮಗೆ ಸೌಲಭ್ಯಗಳು ದೊರಕಬೇಕಾದ ಅಗತ್ಯವಿಲ್ಲ, ನಮ್ಮ ಜ್ಞಾನ, ಶಿಕ್ಷಣ, ವೃತ್ತಿ ಬದ್ಧತೆ, ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನಾವೇ  ಆಡಳಿತಕ್ಕೆ ಸಾಲ ನೀಡುವಂತಾಗಬೇಕು ಎಂದು ಹಾಂಗಲ್ ಬೆಳೆಗಾಲಪೇಟೆ ಸಪಪೂ ಕಾಲೇಜು ಉಪನ್ಯಾಸಕ ವಿ. ಉಮೇಶ್ ತಿಳಿಸಿದರು.
ತಾಲೂಕಿನ ಯಕ್ಷಿ ಗ್ರಾಮದಲ್ಲಿ ಕಲ್ಲೇಶ್ವರ ಯುವಕ ಸಂಘದವರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಮ್ಮ ಬಡತನ, ನಮ್ಮ ಅಜ್ಞಾನವನ್ನು ನಾವೇ ಹೋಗಲಾಡಿಸಿಕೊಳ್ಳಬೇಕು, ಸ್ನೇಹ, ಶಾಂತಿ ಮೂಲಕ ಸಂಘಟಿತರಾಗಿ ನಮ್ಮ ನಾಡು, ನುಡಿಯನ್ನು ಬೆಳೆಸುವ ಸಂಕಲ್ಪ ಇಂತಹ ವೇಳೆ ಆಗಬೇಕು ಎಂದರು.
ಗ್ರಾಮದ ಹಿರಿಯ ಹೊರಬೈಲು ಬಂಗಾರಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಾಂಸ್ಕೃತಿಕ ವೇದಿಕೆಯನ್ನು ಗ್ರಾಮದ ವೈ.ಕೆ. ಮೋಹನ್ ಉದ್ಘಾಟಿಸಿದರು. ಸಂಘದ ವೈ.ಕೆ. ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಯಕ್ಷಿ ಗ್ರಾಮದಲ್ಲಿ ಸುದೀರ್ಘ ಅವಧಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾದ ನಿವೃತ್ತ ಶಿಕ್ಷಕ ರಾಮಮೂರ್ತಿ ಹಾಗೂ ಗ್ರಾಮದ ಹಿರಿಯ ಹೊ.ಬಂಗಾರಪ್ಪ ಅವರನ್ನು ಸನ್ಮಾನಿಸಿದರು. ಗೋಪಾಲಪ್ಪ, ಎಸ್.ಎಂ.ದಿವ್ಯಾ, ಕೆರೆಯಪ್ಪ, ಗಣಪತಿ, ಕೃಷ್ಣಪ್ಪ ಕೆ. ನಾಗಪ್ಪ ಕುಪ್ಪಗಡ್ಡೆ, ಕೆ.ಆರ್. ಗೋಪಾಲ್, ತಿಮ್ಮಪ್ಪ, ನಾರಾಯಣ,ಬಸವರಾಜ್, ರಾಮಪ್ಪ, ಸವಿತಾ, ಸುಶೀಲಮ್ಮ, ಧರ್ಮಮ್ಮ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement