ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ವೆಬ್‌ಸೈಟ್ ಲೋಕಾರ್ಪಣೆ

Lingaraj Badiger
Updated On : 11 Nov 2013, 10:58 am

ಶಿವಮೊಗ್ಗ: ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ಹಾಗೂ ವೆಬ್ ತಾಣವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ಎ.ಆರ್.  ಪ್ರಸನ್ನಕುಮಾರ್, ಸಿಇಓ ನಾರಾಯಣ ಮೂರ್ತಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.11 ರಂದು ಸಂಜೆ 5.30ಕ್ಕೆ ವಿನೋಬನಗರದ 1ನೇ ಹಂತದ ರಾಗಾ ಕಟ್ಟಡದಲ್ಲಿ  ಆಯೋಜಿಸಿರುವ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಗುರುನಾಥ್ ಜ್ಯಾಂತಿಕರ್, ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್ ಪಾಲ್ಗೊಳ್ಳುವರು ಎಂದರು.
2005-06 ರಲ್ಲಿ ಆರಂಭವಾದ ಸಂಸ್ಥೆಯು 2013ರ ಸೆಪ್ಟೆಂಬರ್ ಅಂತ್ಯಕ್ಕೆ 7.41 ಕೋಟಿ ಠೇವಣಿ ಸಂಗ್ರಹಿಸಿದೆ. 6.78 ಕೋಟಿ ವಿವಿಧ ರೀತಿಯ ಸಾಲ ಹಂಚಿಕೆ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಸಂಪೂರ್ಣ ಗಣಕೀಕರಣ ವ್ಯವಸ್ಥೆ ಮಾಡಲಾಗಿದೆ. ವಿವಿಧ ಠೇವಣಿಗಳು ಸಾಲ ಸೌಲಭ್ಯಗಳು ಲಭ್ಯವಿದೆ.
ಮಾರಾಟ ವಿಭಾಗ ಯೋಜನೆ ಮೂಲಕ ಕಲಬೆರಕೆ ಮುಕ್ತ ದಿನಬಳಕೆಯ ಸಾವಯವ ಹಾಗೂ ಇತರೆ ಸಂಸ್ಕರಿತ ಆಹಾರ ವಸ್ತುಗಳ ಮಾರಾಟ ಮಳಿಗೆ ನಡೆಸಲಾಗುತ್ತಿದೆ. ಇ- ಸ್ಟಾಂಪಿಂಗ್ ಪತ್ರ ಮಾರಾಟ, ವೆಸ್ಟ್ರನ್ ಯೂನಿಯನ್ ಮನಿಟ್ರಾನ್ಸ್‌ಫರ್ ವಿಮಾ ಯೋಜನೆ ಸೌಲಭ್ಯ ಒದಗಿಸಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ದಿನೇಶ್ ಕುಮಾರ್ ಎನ್. ಗೋಪಾಲ್, ಪ್ರಭಾಕರ ಜೋಯ್ಸ್, ಎಸ್. ರತ್ನಾಕರ ಮತ್ತಿತರರು ಇದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement