ಯೂಡೂರು, ಕಾನುಗೋಡು ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ
ಹೊಸನಗರ: ನಗರದಿಂದ ಕಾನುಗೋಡು ರಸ್ತೆ ಅಭಿವೃದ್ಧಿಗೆ 1.5 ಕೋಟಿ, ಯಡೂರು-ಮಾಸ್ತಿಕಟ್ಟೆ ರಸ್ತೆ ಅಭಿವೃದ್ಧಿಗೆ 2 ಕೋಟಿ ಅಂದಾಜು ಪಟ್ಟಿಯಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಸ್.ಇ. ಬಾಲಕೃಷ್ಣ ಹೇಳಿದರು.
ತಾಲೂಕಿನ ನಗರ- ಮಾಸ್ತಿಕಟ್ಟೆ ರಸ್ತೆ ಅವ್ಯವಸ್ಥೆ ಬಗ್ಗೆ ಖುದ್ದು ಪರಿಶೀಲಿಸಿದ ಅವರು ಸ್ಥಳೀಯರ ಅಹವಾಲು ಆಲಿಸಿದ ಬಳಿಕ, ತೀರ್ಥಹಳ್ಳಿ- ಕಾನುಗೋಡು- ಮಾಸ್ತಿಕಟ್ಟೆ ಮಾರ್ಗದ ಕುಂದಾಪುರ ರಸ್ತೆ ಅಭಿವೃದ್ಧಿಗೆ ಈಗಾಗಲೇ ನೋಟಿಫಿಕೇಶನ್ ಅಗಿದ್ದು ಆವಾರ್ಡ್ ಆದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಇನ್ನು ಕೊಲ್ಲೂರು ರಸ್ತೆ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು. ಇಇ ರಮೇಶ್, ಎಇಇ ಚಂದ್ರಪ್ಪ ಮತ್ತು ಸ್ಥಳೀಯರು ಹಾಜರಿದ್ದರು.