ವಿದ್ಯುತ್ ಚಿತಾಗಾರಕ್ಕೆ ಚಾಲನೆ ನೀಡಲು ಒತ್ತಾಯ
ಶಿವಮೊಗ್ಗ: ನಗರದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ಚಿತಾಗಾರಕ್ಕೆ ಚಾಲನೆ ನೀಡುವಂತೆ ಬ್ರಾಹ್ಮಣ ಸೇವಾ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸೇವಾ ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಅರ್ಪಿಸಿ, ತುರ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.ನಗರದಲ್ಲಿ ಈಗಾಗಲೇ ಚಿತಾಗಾರದಲ್ಲಿ ನಗರ ಸಭೆವತಿಯಿಂದ ಸುಮಾರು 75 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ ವರ್ಷಗಳೇ ಕಳೆದಿದ್ದರೂ ಉಪಯೋಗ ಮಾತ್ರ ಜನತೆಗೆ ಲಭ್ಯವಾಗುತ್ತಿಲ್ಲ. ಸದ್ಯ ಉರುವಲು ಬಳಸಿ ಶವ ದಹನ ನಡೆಸಲಾಗುತ್ತಿದ್ದು, ಇದರಿಂದ ಸಾಕಷ್ಟು ವೆಚ್ಚವಾಗುತ್ತಿದೆ ಮತ್ತು ಪರಿಸರಕ್ಕೂ ಹಾನಿಯಾಗುತ್ತಿದೆ. ಹೀಗಾಗಿ ಶೀಘ್ರವೇ ವಿದ್ಯುತ್ ಚಿತಾಗಾರವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕೆಂದು ಸಂಘವು ಜಿಲ್ಲಾಡಳಿತವನ್ನು ಆಗ್ರಹಿಸಿತು.
ಮನವಿ ನೀಡುವ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್. ರವಿಶಂಕರ್, ಎಚ್.ಡಿ. ಚಂದ್ರಶೇಖರ್ ಮತ್ತಿತರರು ಇದ್ದರು.