ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಳ್ಳ, ಗುಂಡಿಮಯ

Lingaraj Badiger
Updated On : 11 Nov 2013, 10:58 am

ಶಿವಮೊಗ್ಗದ ನೂತನ ತುಂಗಾ ಸೇತುವೆ ಹಾಳಾಗಿದೆ. ಹಳ್ಳ, ಗುಂಡಿಗಳು ಹೆಚ್ಚಾಗಿ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ವೇಗವಾಗಿ ಹೋಗುವಾಗ ಬಹಳಷ್ಟು ಬಾರಿ ಬಿದ್ದಿರುವ ಉದಾಹಾರಣೆಗಳೂ ಕೂಡ ಇದೆ. ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ಕನಿಷ್ಠ ರಸ್ತೆಗೆ ತೇಪೆ ಹಚ್ಚಲಾದರೂ ಹೇಳಬೇಕು.
-ನರೇಂದ್ರ ಪಾಟೀಲ್, ಹೋಟೆಲ್ ಕಾರ್ಮಿಕ

ರಸ್ತೆ ತುಂಬ ಕಸದ ರಾಶಿ
ಶಿವಮೊಗ್ಗದ ಶಂಕರಮಠ ರಸ್ತೆ ಹಿಂಭಾಗದ ರಸ್ತೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ಕಸದ ರಾಶಿ ತುಂಬಿಕೊಂಡಿದ್ದು, ಸಾರ್ವಜನಿಕರು ಮುಗು ಮುಚ್ಟಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಇಲ್ಲಿನ ರಸ್ತೆ ಕಚ್ಚಾ ರಸ್ತೆಯಾಗಿದೆ.
-ಹರೀಶ್‌ಕುಮಾರ್, ಸ್ಥಳೀಯರು

ಭದ್ರಾವತಿಯಲ್ಲಿ ಕಸದ ಸಮಸ್ಯೆ
ಭದ್ರಾವತಿಯ ವೆಲೂರುಶೆಡ್ ರಸ್ತೆಯಲ್ಲಿ ಕಸದ ರಾಶಿ ತುಂಬಿಕೊಂಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ರೋಗ ರುಜಿನ ಹರಡುವ ಭೀತಿ ಇದೆ. ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಎಲ್ಲೆಂದರಲ್ಲಿ ಮಕ್ಕಳು ಬಹಿರ್ದೆಸೆ ಮಾಡುತ್ತಾರೆ. ಆಗಿಂದಾಗೆ ಮಳೆ ಕೂಡ ಬೀಳುತ್ತಿರುವ ಕಾರಣ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ನಗರಸಭೆಯವರು ಈ ಕೂಡಲೇ ಕಸ ವಿಲೇವಾರಿಗೆ ಕ್ರಮಕೈಗೊಳ್ಳಬೇಕು.
-ನವೀನ್, ಸ್ಥಳೀಯರು

ಸಂಪೂರ್ಣ ಹಾಳಾದ ರೇಲ್ವೆ ಗೇಟ್ ರಸ್ತೆ
ಭದ್ರಾವತಿಯ ಕಡದಕಟ್ಟೆ ಬಳಿ ಇರುವ ರೇಲ್ವೆ ಗೇಟ್ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ರೇಲ್ವೆ ಗೇಟ್ ದಾಟುವಾಗ ಬಹಳಷ್ಟು ಸಮಸ್ಯೆಯಾಗುತ್ತಿದೆ. ಹಲವು ಬಾರಿ ಬೈಕ್ ಸವಾರರು ಬಿದ್ದಿದ್ದಾರೆ. ರೇಲ್ವೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಸಾರ್ವಜನಿಕರು ವ್ಯವಸ್ಥಿತವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು.
-ಲೋಕೇಶ್, ಕಡದಕಟ್ಟೆ ಗ್ರಾಮಸ್ಥ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement