ಅಪಘಾತ: ವ್ಯಕ್ತಿ ಸಾವು
ಭದ್ರಾವತಿ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಬೈಪಾಸ್ ರಸ್ತೆ ಬಳಿ ನಡೆದಿದೆ.
ಕಲ್ಪನಹಳ್ಳಿ ನಿವಾಸಿ ಎನ್ನಲಾದ ಚಂದ್ರಾನಾಯ್ಕ (42) ಮೃತಪಟ್ಟ ವ್ಯಕ್ತಿಯಾಗಿದ್ದು, ಬಾರಂದೂರು ಕ್ರಾಸ್ ಬೈಪಾಸ್ ಬಳಿ ವಾಹನವೊಂದು ಈತನಿಗೆ ಡಿಕ್ಕಿ ಹೊಡೆದು ಹೋಗಿರುವ ಕಾರಣ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಾಗದ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.