ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲ ಕಾರ್ಮಿಕರಿಗೆ ರಾ. ಪಿಂಚಣಿ ವ್ಯವಸ್ಥೆ: ಭರವಸೆ

Rashmi Kasaragodu
Updated On : 12 Nov 2013, 11:25 am

ಶಿವಮೊಗ್ಗ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ- ಲೈಟ್ ಸೌಲಭ್ಯವನ್ನು ಎಲ್ಲ ಕಾರ್ಮಿಕರಿಗಲ್ಲ ವಿಸ್ತರಿಸಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
 ಸೋಮವಾರ ಕುಂಸಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಗರ್ ಹುಕುಂ ಸಾಗುವಳಿದಾರರ, ಕೃಷಿ ಕಾರ್ಮಿಕರ ಬೃಹತ್ ಸಮಾವೇಶದಲ್ಲಿ ಅವರು, ಕಾರ್ಮಿಕರಿಗೆ ನೀಡುವ ಸೌಲಭ್ಯವನ್ನು ಕೃಷಿ ಕಾರ್ಮಿಕರಿಗೂ ವಿಸ್ತರಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
ಸ್ವಸ್ಥ ಬಿಮಾ ಯೋಜನೆ: 99 ಲಕ್ಷ ಕೃಷಿ ಕಾರ್ಮಿಕರ ಕುಟುಂಬವನ್ನು ಸ್ವಸ್ಥ ಬಿಮಾ ಯೋಜನೆ ವ್ಯಾಪ್ತಿಗೆ ತರುವ ಪ್ರಯತ್ನವು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯೊಂದಿಗೆ ನಡೆದಿದೆ. ಈಗಾಗಲೇ 44 ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರಾತಿ ಕೊಟ್ಟಿದ್ದಾರೆ ಎಂದರು.
 ರಿಪ್ಪನ್ ಪೇಟೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐಟಿಐ ಕಾಲೇಜು ಆರಂಭಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್,ಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜಿ.ಡಿ. ನಾರಾಯಣಸಿ ಪ್ಪ, ಮುಖಂಡರಾದ ಎನ್. ರಮೇಶ್, ತೀ.ನ. ಶ್ರೀನಿವಾಸ್, ಇಸ್ಮಾಯಿಲ್ ಖಾನ್, ಬಲ್ಕಿಷ್ ಭಾನು, ಪ್ರಫುಲ್ಲ ಮಧುಕರ್, ಶಾಂತವೀರಪ್ಪಗೌಡ, ಷಡಕ್ಷರಿ, ಸುಂದರೇಶ್, ನಗರದ ಮಹದೇವಪ್ಪ, ರವಿಕುಮಾರ್, ಷಣ್ಮುಖಪ್ಪ ಗೌಡ್ರು, ರಾಮಪ್ಪ ಎಚ್.ಬಿ., ಇಮ್ತಿಯಾಜ್ ಸಾಹೇಬ್, ಮಂಜುನಾಥ ಚೋರಡಿ, ದಿವಾಕರ ಅಗಸವಳ್ಳಿ, ಎಚ್. ಮಂಜುನಾಥ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸಂಜೀವಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಚ್. ಮಂಜುನಾಥ್ ವಂದಿಸಿದರು. ಹೊಳೆಹೊನ್ನೂರು ಬ್ಲಾಕ್ ಅಧ್ಯಕ್ಷ ಎಚ್.ಜಿ. ಮಲ್ಲಯ್ಯ ನಿರೂಪಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement