ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಯಂ ಸಾಗುವಳಿ ಚೀಟಿಗೆ ಮನವಿ

Rashmi Kasaragodu
Updated On : 12 Nov 2013, 11:28 am

ಶಿವಮೊಗ್ಗ: ತಾಲೂಕಿನ ಹಕ್ಕಿ- ಪಿಕ್ಕಿ ಜನಾಂಗದವರು ವ್ಯವಸಾಯ ಮಾಡುತ್ತಿರುವ ಜಮೀನುಗಳಿಗೆ ಕಾಯಂ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆದಿವಾಸಿ ಬುಡಕಟ್ಟು ಹಕ್ಕಿ- ಪಿಕ್ಕಿ ಪರಿವರ್ತನಾ ಸಂಘ ಸೋಮವಾರ ಜಿಲ್ಲಾಧಿಕಾರಿ ವಿಪುಬ್ ಬನ್ಸಲ್ ಅವರಿಗೆ ಮನವಿ ಮಾಡಿದೆ.
ತಾಲೂಕಿನ ಸರ್ವೆ ನಂ.111ರಲ್ಲಿ ಸುಮಾರು 31 ವರ್ಷಗಳಿಂದ 835 ಎಕರೆ ಪ್ರದೇಶಗಳಲ್ಲಿ ನೂರಾರು ಹಕ್ಕಿ-ಪಿಕ್ಕಿ ಜನಾಂಗದವರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಜಮೀನುಗಳಿಗೆ ಟಿ.ಟಿ ಕಂದಾಯ ಕೂಡ ಪಾವತಿಸಿದ್ದಾರೆ. ಸರ್ಕಾರ ಹಂಗಾಮಿ ಸಾಗುವಳಿ, ಹಂಗಾಮಿ ಪಟ್ಟಾ ಕೂಡ ನೀಡಿದೆ. ಅಲ್ಲದೇ 2011ರಲ್ಲಿ ಸಾಗುವಳಿದಾರರು ಈ ಜಮೀನುಗಳಿಗೆ ನೀರಿನ ಕಂದಾಯವೆಂದು 600 ಸಹ ಪಾವತಿಸಿ ರಶೀದಿ ಪಡೆದಿದ್ದಾರೆ.
ಆದರೂ ಶಾಶ್ವತ ಸಾಗುವಳಿ ಚೀಟಿ ನೀಡಿಲ್ಲ ಎಂದು ಸಂಘ ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ ಈ ಬುಡಕಟ್ಟು ಜನಾಂಗದ ಹಿತದೃಷ್ಟಿಯಿಂದ, ಸಂಬಂಧಪಟ್ಟ ಅಧಿಕಾರಿಗಳು, ಸಚಿವರೊಂದಿಗೆ ಚರ್ಚಿಸಿ ವ್ಯವಸಾಯ ಮಾಡುತ್ತಿರುವ ಅರ್ಹ ಸಾಗುವಳಿದಾರರ ಜಮೀನುಗಳಿಗೆ ಕಾಯಂ ಸಾಗುವಳಿ ಚೀಟಿ ನೀಡಬೇಕು ಎಂದು ಸಂಘ ಮನವಿಯಲ್ಲಿ ಆಗ್ರಹಿಸಿದೆ.  ಮಹದೇವಿ, ಪ್ರಕಾಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement